International

ನೋಡ ನೋಡುತ್ತಿದ್ದಂತೆ ಎಲ್ಲೆಡೆ ವೈಮಾನಿಕ ದಾಳಿ-ಆತಂಕದಲ್ಲಿ ಉಕ್ರೇನ್‌ ಪ್ರಜೆಗಳು

ಉಕ್ರೇನ್:‌ ಉಕ್ರೇನ್ ಮೇಲೆ ರಷ್ಯಾದ ಯುದ್ಧದ ಘೋಷಣೆ ಬೆನ್ನಲ್ಲೇ, ಕೆಲವೇ ನಿಮಿಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಉಕ್ರೇನ್ ಸರ್ಕಾರ ಮತ್ತು ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ ಸೇನಾ ಪಡೆಗಳು ಉಕ್ರೇನಿಯನ್ ರಾಜಧಾನಿ ಕೀವ್ ಮತ್ತು ಇತರ ಹಲವಾರು ಪ್ರಮುಖ ನಗರಗಳಲ್ಲಿ ದಾಳಿ ಮಾಡಿವೆ. ಕತ್ತಲಲ್ಲಿ ಸೂರ್ಯೋದಯವನ್ನೂ ನೋಡದ ಉಕ್ರೇನ್  ಜನ ರಷ್ಯಾದ ಸೈನಿಕರ ಬಾಂಬ್ ದಾಳಿಯಿಂದ ಬದುಕುಳಿದರೆ ಸಾಕೆಂದು ಜೀವ ಅಂಗೈಯಲ್ಲಿಟ್ಟು ಬದುಕುತ್ತಿದ್ದಾರೆ.

ಯುದ್ಧ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಉಕ್ರೇನಿಯನ್ ವಾಯುನೆಲೆಯನ್ನು ನಾಶಪಡಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಮತ್ತೊಂದೆಡೆ ನ್ಯಾಟೋ ಪಡೆಗಳು ರಷ್ಯಾವನ್ನು ಎದುರಿಸಲು ಉಕ್ರೇನ್‌ಗೆ ಬೆಂಬಲವಾಗಿ ತಯಾರಿ ನಡೆಸುತ್ತಿವೆ. ಯುನೈಟೆಡ್ ಸ್ಟೇಟ್ಸ್ ಈಗಾಗಲೇ ರಷ್ಯಾದ ಗಡಿಯುದ್ದಕ್ಕೂ NATO ಪಡೆಯನ್ನು ನಿಯೋಜಿಸಿದೆ. ಮಿತ್ರರಾಷ್ಟ್ರಗಳಿಗೆ 800 NATO ಪಡೆಗಳು ಮತ್ತು ಟ್ಯಾಂಕರ್‌ಗಳನ್ನು ಕಳುಹಿಸಿದೆ.

ರಷ್ಯಾ ಹಿಂದೆ ಸರಿಯದಿದ್ದರೆ ನ್ಯಾಟೋ ಪಡೆಗಳೊಂದಿಗೆ ಯುದ್ಧ ಸನ್ನಿಹಿತವಾಗಿದೆ ಎಂದು ಅಧ್ಯಕ್ಷ ಪುಟಿನ್‌ಗೆ ಬೈಡೆನ್‌ ಎಚ್ಚರಿಸಿದ್ದಾರೆ. ಯುಕ್ರೇನ್ ಅಧ್ಯಕ್ಷರು ಯುಎನ್‌ಒ ಸದಸ್ಯ ರಾಷ್ಟ್ರಗಳು ಯುದ್ಧವನ್ನು ಕೊನೆಗೊಳಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಕರೆ ನೀಡಿದರು.

ಉಕ್ರೇನಿಯನ್ ಅಧಿಕಾರಿಗಳು ಕೀವ್, ಎಲ್ವಿವ್, ಖಾರ್ಕಿವ್ ಮತ್ತು ಮರಿಯುಪೋಲ್ನಲ್ಲಿ ಬಾಂಬ್ ಸ್ಫೋಟಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದ್ದಾರೆ. ರಷ್ಯಾ ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ವೀಡಿಯೊಗಳನ್ನು ನೋಡಿದ್ರೆ ಉಕ್ರೇನ್‌ ಪ್ರಜೆಗಳು  ಭಯಭೀತರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಉಕ್ರೇನ್‌ನ ಆಂತರಿಕ ಸಚಿವಾಲಯವು ಗುರುವಾರ ಮಧ್ಯಾಹ್ನದೊಳಗೆ ಉಂಟಾಗುವ ಸಾವುನೋವುಗಳ ಸಂಖ್ಯೆಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

Share Post