International

ಉಕ್ರೇನ್‌ಗೆ ಹಾರಿದ ಏರ್‌ ಇಂಡಿಯಾ- ಭಾರತೀಯರ ರಕ್ಷಣೆಗೆ ನಿಂತ ಕೇಂದ್ರ ಸರ್ಕಾರ

ದೆಹಲಿ:  (Ukraine Crisis)ರಷ್ಯಾದ ಆಕ್ರಮಣದಿಂದ ಯುದ್ಧ ಬಿಕ್ಕಟ್ಟಿಗೆ ಸಿಲುಕಿರುವ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಉಕ್ರೇನ್ ಮೇಲಿನ ದಾಳಿಯನ್ನು ತಪ್ಪಿಸಲು ಸಾದ್ಯ ಇಲ್ಲ ಎಂದು ರಷ್ಯಾ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಎಚ್ಚೆತ್ತ ಭಾರತ ಸರ್ಕಾರ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದೆ.  ಏರ್ ಇಂಡಿಯಾ ಡ್ರೀಮ್‌ಲೈನರ್ ಬಿ-787 ಮಂಗಳವಾರ ಬೆಳಗ್ಗೆ ಉಕ್ರೇನ್‌ಗೆ ತೆರಳಿದೆ. ಉಕ್ರೇನ್‌ನ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬೋರಿಸ್‌ಪಿಲ್‌ನಿಂದ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.

ಶಿಕ್ಷಣ, ವ್ಯಾಪಾರ ಮತ್ತು ಇತರ ಕೆಲಸದ ನಿಮತ್ತ ಉಕ್ರೇನ್‌ಗೆ ಹೋದ ಸುಮಾರು 20,000 ಭಾರತೀಯರು ಆದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ರಾಜತಾಂತ್ರಿಕರನ್ನು ಹೊರತುಪಡಿಸಿ ಎಲ್ಲರೂ ಭಾರತಕ್ಕೆ ತೆರಳಬೇಕು ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಕರೋನಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಷೀಣಿಸುತ್ತಿರುವ ಕಾರಣ ಭಾರತೀಯ ನಾಗರಿಕ ವಿಮಾನಯಾನ ಇಲಾಖೆ ವಿದೇಶಿ ವಿಮಾನಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಇದರೊಂದಿಗೆ ಏರ್ ಇಂಡಿಯಾ ಫೆಬ್ರವರಿ 22, 24 ಮತ್ತು 26 ರಂದು ಉಕ್ರೇನ್‌ನ ಬೋರಿಸ್‌ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮೂರು ಭಾರತ್ ಮಿಷನ್ ವಿಮಾನ ಸೇವೆಯನ್ನು ಪ್ರಾರಂಭಿಸಿದೆ.

ಏರ್ ಇಂಡಿಯಾ ವಿಮಾನ ಟಿಕೆಟ್‌ ಸಂಬಂಧಿಸದಂತೆ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ತೆರೆಯಲಾಗುವುದು ಎಂದು ಕಂಪನಿಯು ಈಗಾಗಲೇ ಘೋಷಿಸಿದೆ. 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯದ ಡ್ರೀಮ್‌ಲೈನರ್ ಬಿ-787 ಮಂಗಳವಾರ ಬೆಳಗ್ಗೆ ಟೇಕಾಫ್ ಆಗಿದೆ. ಮಂಗಳವಾರ ರಾತ್ರಿ ಉಕ್ರೇನ್‌ನಿಂದ ಹೊರಟು ದೆಹಲಿ ತಲುಪಲಿದೆ. ಮತ್ತೊಂದೆಡೆ, ಉಕ್ರೇನ್ ಮೇಲೆ ದಾಳಿ ಮಾಡಲು ತಯಾರಿ ನಡೆಸುತ್ತಿರುವ ರಷ್ಯಾವನ್ನು ತಡೆಯಲು ಉಕ್ರೇನ್, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ನೆರವು ಕೋರಿದೆ.

Share Post