ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ- ಸಿಕ್ಕ ಸಿಕ್ಕ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ
ಶಿವಮೊಗ್ಗ: ಭಜರಂಗದಳ ಕಾರ್ಕರ್ತ ಹರ್ಷನ ಕೊಲೆ ಪ್ರಕರಣ, ಶಿವಮೊಗ್ಗದಲ್ಲಿ ಪರಿಸ್ಥಿತಿ ತಾರಕಕ್ಕೇರಿದೆ. ಇಂದು ಮರಣೋತ್ತರ ಪರೀಕ್ಷೆ ನಂತರ ಪಾರ್ಥಿವ ಶರೀರವನ್ನು ಮೆಗ್ಗಾನ್ ಆಸ್ಪತ್ರೆಯಿಂದ ಬಸವನ ಬೀದಿಯಲ್ಲಿರುವ ಹರ್ಷನ ಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಉದ್ರಿಕ್ತರ ಗುಂಪೊಂದು ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ.
ರಸ್ತೆಯಲ್ಲಿ ಸಿಕ್ಕ ಸಿಕ್ಕ ಕಡೆ ಕಲ್ಲು ತೂರಾಟ ನಡೆಸಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನ ಗೊಳಿಸಿದ್ದಾರೆ. ಕಲ್ಲು ತೂರಾಟದಿಂದ ಮನೆ, ಶಾಪ್, ಅಂಗಡಿಗಳಿಗೆ ಹಾನಿಯಾಗಿದೆ. ಮನೆ ಕಿಟಕಿ ಗಾಜು ಶಾಪ್ಗಳ ಗಾಜುಗಳು ಪುಡಿಪುಡಿಯಾಗಿವೆ. ದಾರಿಯಲಿರವ ಕಾರುಗಳ ಮೇಲೂ ಕಲ್ಲು ತೂರಾಟ ನಡೆಸಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿವೆ. ಆಜಾದ್ನಗರದ ಮೂರನೇ ಕ್ರಾಸ್ನಲ್ಲಿ ಕಂಡ ಕಂಡ ಕಾರು, ಬೈಕ್ಗಳ ಮೇಲೆ ಕಲ್ಲು ತೂರಾಟ ನಡೆಸಲಾಗ್ತಿದೆ.
ಜೊತೆಗೆ ಸಿಕ್ಕ ಸಿಕ್ಕ ಬೈಕ್ಗಳಿಗೆ ಪೆಟ್ರೋಲದ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೋಸರು ಹರಸಾಹಸ ಪಡುತ್ತಿದ್ದಾರೆ. ಹಿಂದೂ ಕಾರ್ಯಕರ್ತನ ಹತ್ಯೆಗೆ ಶಿವಮೊಗ್ಗ ಜಿಲ್ಲೆ ಧಗಧಗ ಹೊತ್ತಿ ಉರಿಯುತ್ತಿದೆ. ಉದ್ರಿಕ್ತರ ಗುಂಪಿನ ದಾಳಿಗೆ ಹೆದರಿ ಜನ ಮನೆಗಳಿಗೆ ಓಡುತ್ತಿದ್ದಾರೆ. ಎಲ್ಲೆಡೆ ಖಾಕಿ ಸರ್ಪಗಾವಲು ಹಾಕಿದೆ.