National

ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ-ಹಲವು ನಕ್ಸಲರು ಬಲಿ

ಛತ್ತೀಸ್‌ಘಡ: ಕೆಲ ದಿನಗಳಿಂದ ಶಾಂತವಾಗಿದ್ದ ಅರಣ್ಯದಲ್ಲಿ ಈಗ ಮತ್ತೆ ಗುಂಡಿನ ಸದ್ದು ಕೇಳಿ ಬರುತ್ತಿದೆ. ಪೊಲೀಸರ ಮತ್ತು ನಕ್ಸಲರ ಗುಂಡಿನ ದಾಳಿಗೆ ಅರಣ್ಯದಲ್ಲಿ ವಾಸ ಮಾಡುವ ಆದಿವಾಸಿಗಳು ಭಯಭೀತರಾಗಿದ್ದಾರೆ. ಕೆಲದಿನಗಳಿಂದ ಕೊಸ್ರಾಂಡ ಅರಣ್ಯ ಪ್ರದೇಶದಲ್ಲಿ ನಕ್ಸಲರು ಓಡಾಡುತ್ತಿರುವ ಮಾಹಿತಿ ತಿಳಿದ ಪೊಲೀಸರು ಸ್ಥಳದಲ್ಲಿಯೇ ಬೀಡಿ ಬಿಟ್ಟಿದ್ರು.

ನಿನ್ನೆ ರಾತ್ರಿ ನಕ್ಸಲರು ಇದ್ದ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡಿನ ದಾಳಿಗೆ ಪ್ರತಿದಾಳಿಯಾಗಿ ನಕ್ಸಲರು ಕೂಡಾ ದಾಳಿ ನಡೆಸಿದ್ದಾರೆ. ದಾಳಿಯಲ್ಲು ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರು ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಂಕರ್ ಜಿಲ್ಲೆಯ ಕೊಸ್ರಾಂಡ ಅರಣ್ಯ ಪ್ರದೇಶದಲ್ಲಿ ಡಿಆರ್‌ಜಿ ಮತ್ತು ಎಸ್‌ಎಸ್‌ಬಿ ತಂಡ ಹಾಗೂ ನಕ್ಸಲರ ನಡುವೆ ಫೆಬ್ರವರಿ 17, 2022 ರ ಮಧ್ಯರಾತ್ರಿಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ.  ಗುಂಡಿನ ಚಕಮಕಿಯಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಹತರಾಗಿದ್ದಾರೆ ಎಂದು ಎಸ್ಪಿ ಶಲಬ್ ಸಿನ್ಹಾ ಹೇಳಿದ್ದಾರೆ. ಕೊಸ್ರೊಂಡಾ ಅರಣ್ಯಗಳಲ್ಲಿ ನಕ್ಸಲರು ಹಾವಳಿ ಹೆಚ್ಚಾಗಿದೆ. ಆ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಸಾವನ್ನಪ್ಪಿರುವ  ನಕ್ಸಲರ ಶವಗಳ ಕುರುಹುಗಳನ್ನು ಪತ್ತೆ ಮಾಡಿದ್ದಾರೆ.

ಆದರೆ, ಎನ್‌ಕೌಂಟರ್‌ನಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕಿದೆ.

Share Post