International

ಉಕ್ರೇನ್‌ ಗಡಿಯಿಂದ ಸೇನೆ ವಾಪಸ್‌ : ವೀಡಿಯೋ ಬಿಡುಗಡೆ ಮಾಡಿದ ರಷ್ಯಾ

ಮಾಸ್ಕೋ : ಊಕ್ರೇನ್‌ ಗಡಿ ಮತ್ತು ಕ್ರಿಮಿಯಾದಿಂದ ರಷ್ಯ ತನ್ನ ಸೇನಾ ಪಡೆಗಳನ್ನು ಹಿಂಪಡೆದಿದೆ. ಆದರೆ ಉಕ್ರೇನ್‌ನಿಂದ ರಷ್ಯ ತಮ್ಮ ಸೇನಾ ಪಡೆಯನ್ನು ಹಿಂಪಡೆದಿಲ್ಲ ಎಂದು ಅಮೆರಿಕ ಆರೋಪ ಮಾಡಿತ್ತು. ಅದಕ್ಕೆ ರಷ್ಯ ವೀಡಿಯೋ ಬಿಡುಗಡೆ ಮಾಡುವ ಮೂಲಕ ಅಮೆರಿಕದ ಆರೋಪವನ್ನು ತಳ್ಳಿ ಹಾಕಿದೆ.

ವೀಡಿಯೋದಲ್ಲಿ ಸೇನಾ ಪಡೆಗಳು, ಮಿಲಿಟರಿ ಉಪಕರಣಗಳು ಮರಳುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಟ್ಯಾಂಕ್‌ಗಳು ಮತ್ತು ಶಸ್ತ್ರ ಸಜ್ಜಿತ ವಾಹನಗಳನ್ನು ರೈಲಿನಲ್ಲಿ ಸುಮಾರು 1000ಕಿಮೀ ಸಾಗಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Share Post