Bengaluru

ಸಮವಸ್ತ್ರ ಇರುವ ಕಡೆ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ; ಸಚಿವ ಅಶ್ವತ್ಥನಾರಾಯಣ್‌

ಬೆಂಗಳೂರು: ಶಾಲಾ ಆಡಳಿತ ಮಂಡಳಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದರೆ, ಅಲ್ಲಿ ಸಮವಸ್ತ್ರ ಮಾತ್ರ ಹಾಕಬೇಕು. ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಿ ಬರುವಂತಿಲ್ಲ ಎಂದು ಸಚಿವ ಡಾ.ಅಶ್ವತ್ಥನಾರಾಯಣ್‌ ಹೇಳಿದ್ದಾರೆ.

ವಿಧಾನಸೌಧದ ಬಳಿ ಮಾತನಾಡಿದ ಅವರು, ಸಮವಸ್ತ್ರ ಇಲ್ಲದ ಡಿಗ್ರಿ ಕಾಲೇಜುಗಳಲ್ಲಿ ಯಾವುದೇ ಡ್ರೆಸ್‌ನಲ್ಲಿ ಬರಬಹುದು. ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದ್ರೆ ಸಮವಸ್ತ್ರ ನಿಯಮ ಇದ್ದಾಗ ಅಲ್ಲಿ ನಿಯಮ ಉಲ್ಲಂಘಿಸುವುದು ತಪ್ಪಾಗುತ್ತದೆ. ಈ ಬಗ್ಗೆ ಕೋರ್ಟ್‌ ಕೂಡಾ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ, ಕಾನೂನನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಶಾಲಾ-ಕಾಲೇಜುಗಳಲ್ಲಿ ಸಮಾನತೆ ಇರಬೇಕೆಂಬ ಕಾರಣಕ್ಕೆ ಸಮವಸ್ತ್ರ ಸಂಹಿತೆ ರೂಪಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಾದರೆ ಅಲ್ಲಿನ ಆಡಳಿತ ಮಂಡಳಿ ಸಮವಸ್ತ್ರ ಹೇಗಿರಬೇಕು ಎಂಬುದರ ಬಗ್ಗೆ ನಿಯಮ ರೂಪಿಸುತ್ತವೆ. ಅದರಂತೆ ವಿದ್ಯಾರ್ಥಿಗಳು, ಪೋಷಕರು ನಡೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ್‌ ಹೇಳಿದ್ದಾರೆ.

 

Share Post