ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿಯಾದ ಶಿವರಾಜ್ ಕುಮಾರ್
ನವದೆಹಲಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚೆನ್ನೈ ಪ್ರವಾಸದಲ್ಲಿದ್ದು ನಿನ್ನೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕಾರ್ಯಕ್ರಮ ನಿಮಿತ್ತ ಚೆನ್ನೈಗೆ ಆಗಮಿಸಿದ್ದರು. ಅವರು ರಾಜ್ಯಪಾಲರ ಭವನದಲ್ಲಿ ತಂಗಿದ್ದರು. ಈ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ರಾಜ್ಯಪಾಲರ ಭವನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಎರಡು ಮೂರು ದಿನದಿಂದ ಶಿವರಾಜ್ ಕುಮಾರ್ ಚೆನ್ನೈನಲ್ಲಿದ್ದು, ಮೊನ್ನೆಯಷ್ಟೇ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.