ಹುವಾವೇ ಚೀನಿ ಸಂಸ್ಥೆ ಮೇಲೆ ಐಟಿ ರೇಡ್
ನವದೆಹಲಿ : ಆಧಾಯ ತೆರಿಗ ಅಧಿಕಾರಿಗಳು ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮಂಗಳವಾರ ದೇಶದ ಹಲವು ಭಾಗಗಳಲ್ಲಿರುವ ಹುವಾವೇ ಕಂಪನಿಗಳ ಮೇಲೆ ಐಟಿ ರೇಯ್ಡ್ ನಡೆದಿದೆ.
ಚೀನಾದ ಟೆಲಿಕಾಂ ಸಂಸ್ಥೆ ಹುವಾವೇ ಮೇಲೆ ಐಟಿ ದಾಳಿ ನಡೆದಿದೆ. ದೆಗಲಿ, ಬೆಂಗಳೂರು, ಗುರುಗ್ರಾ,ಮದಲ್ಲಿರುವ ಹುವಾವೇ ಕಂಪನಿಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ನಮ್ಮ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ. ನಮ್ಮ ಎಲ್ಲಾ ಸಂಸ್ಥೆಗಳು ಭಾರತದ ನಿಬಂಧನೆಗಳನ್ನು ಪಾಲಿಸುತ್ತಿದೆ ಎಂಬ ವಿಶ್ವಾಸವಿದೆ. ಹೆಚ್ಚಿನ ಮಾಹಿತಿ ಏನಾದರೂ ಬೇಕಿದ್ದಲ್ಲಿ ನಾವು ಕೊಡಲು ಸಿದ್ಧರಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಾವು ಸರ್ಕಾರದ ಇಲಾಖೆಯವರನ್ನು ಸಂಪರ್ಕಿಸಿ ಮಾಹಿತ ಪಡೆಯುತ್ತೇವೆ ಹಾಗೆಯೇ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹುವಾಯಿ ಸಂಸ್ಥೆಯ ಕಾರ್ಯ ನಿರ್ವಾಹಕರು ತಿಳಿಸದ್ದಾರೆ.
ಕಳೆದ ವರ್ಷ ಅಧಿಕಾರಿಗಳು ಶಿಯೋಮಿ, ಓಪ್ಪೋ ಮೇಲೆ ಇದೇ ರೀತಿ ದಾಳೀ ನಡೆಸಿದಾಗ ಸುಮಾರು 6500 ಕೋಟಿ ದಾಖಲೆಗಳಿಲ್ಲದ ಆದಾಯವನ್ನು ಪತ್ತೆ ಹಚ್ಚಿತ್ತು.