Bengaluru

ಹಿಜಾಬ್‌ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ-ತ್ರಿಸದಸ್ಯ ಪೀಠದಿಂದ ಆದೇಶ

ಬೆಂಗಳೂರು:  ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಇಂದು ಕೂಡ ವಿಚಾರಣೆ ನಡೆದಿದ್ದು. ಹಿಜಾಬ್‌ ಪರ/ವಿರೋಧ ವಾದ/ಪ್ರತಿವಾದಗಳು ನಡೆದಿವೆ. ಸಿಜೆ ರಿತುರಾಜ್‌ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್‌, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುನುದ್ದೀನ್‌ ಅವರಿಂದ ವಿಚಾರಣೆ ನಡೆದಿದೆ. ದೇವದತ್‌ ಕಾಮತ್‌ ವಾದ ಮಂಡನೆ ಮುಗಿದಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಹೈಕೋರ್ಟ್‌ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಯುವತಿಯ ಒಂದನೇ ಅರ್ಜಿಯನ್ನು ವಾಪಸ್‌ ಪಡೆಯಲು ಕೋರ್ಟ್‌ ಸೂಚನೆ ನೀಡಿದೆ. ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ

ಎ.ಜಿ.ನಾವದಗಿ:
ಒಂದೇ ಯುವತಿಯ 2ಅರ್ಜಿಗೆ ನಾವದಗಿ ಆಕ್ಷೇಪ ಯುವತಿ ಪರ ಸಂಜಯ್‌ ಹೆಗ್ಡೆ ಈಗಾಗಲೇ ವಾದ ಮಂಡಿಸಿದ್ದಾರೆ. ವಾದಮಂಡನೆ ಹಲವು ವಕೀಲರಿಗೆ ಹಕ್ಕು ಮಂಡನೆ ಆ ಯುವತಿ ಈಗಾಗಲೇ ಇನ್ನೊಂದು ಅರ್ಜಿ ಸಲ್ಲಿಸಿದ್ದಾಳೆ.
ನಾನು ಮೊದಲು ವಾದ ಮಂಡಿಸುತ್ತೇನೆಂದು ವಕೀಲರ ಪೈಪೋಟಿ. ಮೊದಲನೇ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ
ರವಿವರ್ಮ ಕುಮಾರ್‌:
ರಾಜ್ಯ ಸರ್ಕಾರದ ಸಮವಸ್ತ್ರ ಆದೇಶ ಓದುತ್ತಿರುವ ರವಿಕುಮಾರ್‌ ಯುವತಿಯ ಎರಡನೇ ಅರ್ಜಿ ಸಂಬಂಧ ರವಿಕುಮಾರ್‌ ವಾದ. ಸರ್ಕಾರ ಸಮವಸ್ತ್ರ ನೀತಿ ಬಗ್ಗೆ ಉನ್ನತ ಸಮಿತಿ ರಚನೆ ಮಾಡಿದೆ. ವರದಿ ಬರುವವರೆಗೂ ಈಗಿರುವ ಸೂಚನೆ ಪಾಲನೆ ಮಾಡುವಂತೆ ಆದೇಶ ನೀಡಿದೆ. ಸರ್ಕಾರ ಸಮವಸ್ತ್ರ ಕುರಿತು ಇನ್ನೂ ಯಾವುದೇ ತೀರ್ಮಾನ ಆಗಲಿ, ಸಂಹಿತೆ ಆಗಲಿ ರೂಪಿಸಿಲ್ಲ. ಹಿಜಾಬ್‌ ಧರಿಸಲೂ ಯಾವುದೇ ನಿರ್ಬಂಧ ಇಲ್ಲ. ನಾನು ಸುವ್ಯವಸ್ಥೆ ವಿವಾದಕ್ಕೆ ಹೋಗುವುದಿಲ್ಲ ಇದು ಅವ್ಯವಸ್ಥೆ. ಸಮವಸ್ತ್ರ ಸಂಹಿತೆ ರಚಿಸದೆ ಸಮವಸ್ತ್ರ ಧರಿಸಬೇಕು ಎಂಬುದು ಅರ್ಥಹೀನ. ಸಮಾನತೆ, ಸಾಮರಸ್ಯಕ್ಕೆ ಧಕ್ಕೆಯಾಗುವ ಹಾಗೆ ನಾವು ಬಟ್ಟೆ ಧರಿಸುತ್ತಿಲ್ಲ. ಹಿಜಾಬ್‌ ಧರಿಸಲು ಯಾವುದೇ ನಿರ್ಬಂಧವಿಲ್ಲ ಕಾಯ್ದೆಯ ಸೆಕ್ಷನ್‌ಗಳ ವಿವರಣೆ ನೀಡುತ್ತಿರುವ ವಕೀಲ.

 

 

Share Post