Bengaluru

ಹಿಜಾಬ್‌ ಮೂಲಭೂತ ಹಕ್ಕು ಎಂದು ಕಾಂಗ್ರೆಸ್‌ ಪ್ರತಿಪಾದನೆ; ಬಿಜೆಪಿ

ಬೆಂಗಳೂರು: ಹಿಜಾಬ್‌ ಧರಿಸದೇ ಹೋದರೆ ಮುಸ್ಲಿಂ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳಿಕೆ ರಾಜ್ಯ ಬಿಜೆಪಿ ಕಟುಕಿಯಾಡಿದೆ.  ಈ ಬಗ್ಗೆ ರಾಜ್ಯ ಬಿಜೆಪಿ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, ಕಾಂಗ್ರೆಸ್‌ ವಿರುದ್ಧ ಕಿಡಕಾರಲಾಗಿದೆ.

   ಬಿಜೆಪಿ ಟ್ವೀಟ್‌ನಲ್ಲೇದೆ..?

ಹಿಜಾಬ್ ಮೂಲಭೂತ ಹಕ್ಕು ಎಂಬ ಕಾಂಗ್ರೆಸ್‌ ಪ್ರತಿಪಾದನೆಯ ಮೂಲ ಬಹಿರಂಗವಾಗುತ್ತಿದೆ. ಹೆಣ್ಣನ್ನು ಶೋಷಣೆಯ ವಸ್ತುವಾಗಿ ಪರಿಭಾವಿಸುವ ಮೂಲಭೂತವಾದದ ವಿಸ್ತರಿತ ರೂಪವಿದು. ಸಂವಿಧಾನದಲ್ಲಿ ಉಲ್ಲೇಖಿಸಿರುವ ಸಮಾನತೆಯ ತತ್ವಕ್ಕೆ ಕಾಂಗ್ರೆಸ್‌ ಏಕೆ ಗೌರವ ನೀಡುತ್ತಿಲ್ಲ, ಇದು ಸಂವಿಧಾನಕ್ಕೆ ಮಾಡುವ ಅಪಮಾನವಲ್ಲವೇ..?.

ಹೀಗಂತ ಬಿಜೆಪಿ ಟ್ವೀಟ್‌ ಮಾಡಿದೆ.

Share Post