National

ಪುಲ್ವಾಮಾ ದಾಳಿಗೆ ಮೂರು ವರ್ಷ:ಹುತಾತ್ಮ ಯೋಧರಿಗೆ ಪ್ರಧಾನಿ ಶ್ರದ್ಧಾಂಜಲಿ

ದೆಹಲಿ: ಪುಲ್ವಾಮಾ(Pulvama) ಭಯೋತ್ಪಾದಕ ದಾಳಿಗೆ ಇಂದಿಗೆ ಮೂರು ವರ್ಷ. ದೇಶದಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡಿಕೊಳ್ತಿದ್ದ ವೇಳೆ ಇದ್ದಕ್ಕಿದ್ದಂತೆ ದೇಶದ ಜನರನ್ನು ಆಘಾತಕ್ಕೆ ಗುರಿಮಾಡುವಂತಹ ಘಟನೆ 2019ರಲ್ಲಿ ನಡೆದಿತ್ತು. ಇಡೀ ದೇಶವೇ ಕಣ್ಣೀರಿನಿಂದ, ಶೋಕಸಾಗರದಲ್ಲಿ ಮುಳುಗಿತ್ತು ಅಂತಹ ದುರ್ಘಟನೆ ನಡೆದು ಇಂದಿಗೆ ಮೂರು ವರ್ಷ ಕಳೆದಿದೆ.  ಪ್ರಧಾನಿ ಮೋದಿ(PM) ಸೇರಿದಂತೆ ದೇಶದ ಜನತೆ ಸೋಮವಾರ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 2019 ರ ಈ ದಿನದಂದು ಪುಲ್ವಾಮಾದಲ್ಲಿ ಹುತಾತ್ಮರಾದ ಎಲ್ಲ ಯೋಧರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಮ್ಮ ದೇಶಕ್ಕೆ ವೀರಯೋಧರು ಮಾಡಿದ ಅತ್ಯುತ್ತಮ ಸೇವೆಗಳನ್ನು ಈ ಸಮಯದಲ್ಲಿ ಸ್ಮರಿಸುತ್ತೇನೆ. ಅವರ ಶೌರ್ಯ ಮತ್ತು ಅತ್ಯುನ್ನತ ತ್ಯಾಗವು ಪ್ರತಿ ಭಾರತೀಯನನ್ನು ಬಲಿಷ್ಠ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಎಂದರು

ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದರು. ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ನಡೆಸಿದ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು.

78 ವಾಹನಗಳಲ್ಲಿ 2,500 ಸಿಆರ್‌ಪಿಎಫ್ ಪಡೆಗಳು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಿದಾಗ ಜೈಶ್-ಎ-ಮೊಹಮ್ಮದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಆತ್ಮಾಹುತಿ ದಾಳಿ ನಡೆಸಿತು. ಘಟನೆಯಲ್ಲಿ 76ನೇ ಬೆಟಾಲಿಯನ್‌ನ ಸುಮಾರು 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಪಾಕಿಸ್ತಾನ ಪ್ರೇರಿತ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇದರೊಂದಿಗೆ ಭಾರತ ಭಯೋತ್ಪಾದಕರಿಗೆ ತಿಳಿಯದ ರೀತಿಯಲ್ಲಿ ಪ್ರತಿದಾಳಿ ನಡೆಸಿತು.

ಫೆಬ್ರವರಿ 26 ರ ಬೆಳಿಗ್ಗೆ, ಭಾರತೀಯ ಸೇನೆಯ ಮೇಲಿನ ದಾಳಿಯ ನಂತರ, ಭಾರತೀಯ ವಾಯುಪಡೆಯ ವಿಮಾನಗಳು ಗಡಿಯನ್ನು ದಾಟಿ ಪಾಕಿಸ್ತಾನದ ಪ್ರದೇಶ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ನೆಲೆಯನ್ನು ಧ್ವಂಸಗೊಳಿಸಿದ್ದವು. ಈ ವೈಮಾನಿಕ ದಾಳಿಯಲ್ಲಿ ಸುಮಾರು 300 ಉಗ್ರರು ಹತರಾಗಿದ್ದರು.

Share Post