Districts

ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತಿಳಿಯಾದ ಮಕ್ಕಳ ನಮಾಜ್‌ ವಿಚಾರ

ದಕ್ಷಿಣ ಕನ್ನಡ:  ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್‌ ವಿಚಾರಕ್ಕೆ ಸಂಭಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಸಭೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಶಾಲಾ ಸಮಯದಲ್ಲಿ ಧಾರ್ಮಿಕ ಚಟುವಟಿಕೆ ನಡೆಸದಂತೆ ಸೂಚನೆ ನೀಡಲಾಗಿದೆ.

ಬಿಇಒ ಸೂಚನೆಗೆ ಮುಸ್ಲಿಂ ವಿದ್ಯಾರ್ಥಗಿಳ ಪೋಷಕರು ಸಮ್ಮತಿ ಸೂಚಿಸಿದ್ದು, ಮಕ್ಕಳಿಗೆ ತಿಳಿಹೇಳುತ್ತೇವೆಂದು ತಿಳಿಸಿದ್ದಾರೆ. ಇನ್ನು ಮುಂದೆ ಶಾಲೆಯಲ್ಲಿ ನಮಾಜ್‌ ಮಾಡಲ್ಲವೆಂದು ಒಪ್ಪಿಗೆ ನೀಡಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ವಿವಾದವನ್ನು ಶಿಕ್ಷಣಾಧಿಕಾರಿ ಯಾವುದೇ ತಕರಾರಿಲ್ಲದೆ ಬಗೆಹರಿಸಿದ್ದಾರೆ.

ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಹಿಜಾಬ್‌ ವಿವಾದದ ಗೊಂದಲದಲ್ಲಿಯೇ ಮತ್ತೊಂದು ತಲೆನೋವು ಎಂದುಕೊಂಡಿದ್ದ ವಿಚಾರಕ್ಕೆ ಬಿಇಓ ಅಂತಯ ಹಾಡಿದ್ದಾರೆ. ಪೋಷಕರ ಸಭೆ ನಡೆಸಿ ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಿ ಎಂದು ತಿಳಿ ಹೇಳಿದ್ದಾರೆ. ಬಿಇಒ ಸೂಚನೆ ಮೇರೆಗೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ.

Share Post