ಜಾರ್ಖಾಂಡ್‌ನಲ್ಲಿ ಐಇಡಿ ಬ್ಲಾಸ್ಟ್, ಇಬ್ಬರು ಕೋಬ್ರಾ ಜವಾನರಿಗೆ ಗಂಭೀರ ಗಾಯ
ರಾಂಚಿ: ಜಾರ್ಖಂಡ್‌ನ ಲೋಹರ್ದಗಾ ಜಿಲ್ಲೆಯಲ್ಲಿ ನಡೆದ ಐಇಡಿ(IED) ಸ್ಫೋಟಗೊಂಡಿದೆ ದುರಂತದಲ್ಲಿ ಇಬ್ಬರು ಕೋಬ್ರಾ ಜವಾನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಮಾನದ ಮೂಲಕ ರಾಂಚಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಬ್ರಾ ವಿಶೇಷ ಕಾರ್ಯಾಚರಣೆ ಘಟಕವಾಗಿರುವ ಸಿಆರ್‌ಪಿಎಫ್‌ನ ಜಂಟಿ ತಂಡ ಮತ್ತು ಜಾರ್ಖಂಡ್ ಪೊಲೀಸರು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಉಗ್ರಗಾಮಿ ಪೀಡಿತ ಬುಲ್‌ಬುಲ್-ಪೆಶ್ರಾರ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.
ಕೋಬ್ರಾ ಜವಾನರಾದ ದಿಲೀಪ್ ಕುಮಾರ್ ಮತ್ತು ನಾರಾಯಣ ದಾಸ್ ಐಇಡಿ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೆಶ್ರಾರ್ ಪೊಲೀಸ್ ಠಾಣೆಯ ಅಧಿಕಾರಿ ರಿಷಿ ಕುಮಾರ್ ತಿಳಿಸಿದ್ದಾರೆ. ಗಾಯಾಳುಗಳನ್ನು ಚಾಪರ್‌ನಲ್ಲಿ ರಾಂಚಿಗೆ ಕೊಂಡೊಯ್ಯಲಾಯಿತು ಎಂದು ಹೇಳಿದ್ರು.
ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾಗಿ ನಾವು ಇಲ್ಲಿ ಭಯದಿಂದಲೇ ಬದುಕುತ್ತಿದ್ದೇವೆ ಎಂದು ಅಳಲು ತೋಡಿಕೊಂಡ್ರು. ಘಟನೆ ಸಂಬಂಧ ಬಂಡುಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುಸುತ್ತಿರುವುದಾಗಿ ರಿಷಿ ಕುಮಾರ್ ಹೇಳಿದ್ದಾರೆ.