ಮಗುವಿನ ಲಿಂಗ ಪರಿವರ್ತನೆ ಮಾಡುವುದಾಗಿ ಗರ್ಭಿಣಿ ತಲೆಗೆ ಮೊಳೆ ಹೊಡೆದ ನಕಲಿ ಬಾಬಾ
ಪಾಕಿಸ್ತಾನ: ಹೆಣ್ಣು ಭ್ರೂಣ ಹತ್ಯೆ ಶಿಕ್ಷರ್ಹ ಅಪರಾಧ ಎಂದು ಸಾಕಷ್ಟು ಕಾನೂನುಗಳನ್ನು ತಂದರೂ ಇನ್ನು ಕೆಲೆಡೆ ಈ ಮೂಢನಂಬಿಕೆ ಗಂಡು ಮಕ್ಕಳ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಹೆಣ್ಣು ಭ್ರೂಣವನ್ನು ಗಂಡು ಭ್ರೂನವಾಗಿ ಪರಿವರ್ತನೆ ಮಾಡುವುದು ವೈದ್ಯರಿಗೇ ಸಾಧ್ಯವಾಗದ ಕೆಲಸವನ್ನು ಒಬ್ಬ ನಕಲಿ ಬಾಬಾ ಮಾಡುವುದಾಗಿ ಹೇಳಿ ಗರ್ಭಿಣಿ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ.
ಪಾಕಿಸ್ತಾನದ ಪೇಶಾವರದಲ್ಲಿ ಮಹಿಳೆಯೊಬ್ಬರು ಮದುವೆಯ ನಂತರ ಸತತವಾಗಿ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಾಗದಿದ್ದರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಮತ್ತೊಮ್ಮೆ ಗರ್ಭವತಿಯಾದ ಆಕೆ ಗಂಡು ಮಗುವಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ. ತಿಂಗಳುಗಳು ಕಳೆದಂತೆ ಮತ್ತೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಆತಂಕ ಕಾಡಿದೆ.
ಈ ಬಾರಿ ಗಂಡು ಮಗು ಹುಟ್ಟದಿದ್ದರೆ ತನ್ನನ್ನು ಬಿಟ್ಟು ಹೋಗುತ್ತೇನೆ ಎಂಬ ಗಂಡನ ಬೆದರಿಕೆಗಳು ಆಕೆಯ ಮನಃಶಾಂತಿಯನ್ನು ಕಸಿದುಕೊಂಡಿವೆ. ಈ ತೊಳಾಟದಲ್ಲಿದ್ದ ಅವಳಿಗೆ ನಕಲಿ ಬಾಬಾ ಬಗ್ಗೆ ತಿಳಿದುಕೊಂಡು ಆತನ ಬಳಿ ಹೋಗಿದ್ದಾಳೆ. ಆಕೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡ ಬಾಬಾ “ನೀನು ಭಯಪಡಬೇಕಿಲ್ಲ, ನಿನ್ನ ಹೊಟ್ಟೆಯಲ್ಲಿ ಹೆಣ್ಣು ಬೆಳೆಯುತ್ತಿದ್ದರೂ, ಆ ಮಗುವನ್ನು ಗಂಡು ಮಗುವನ್ನಾಗಿ ಮಾಡುತ್ತೇನೆ” ಎಂಬ ಭರವಸೆಯನ್ನು ನೀಡಿದ್ದಾನೆ.
ಆದರೆ ನೀನು ತಲೆ ಮೇಲೆ ಮೊಳೆ ಹೊಡೆಸಿಕೊಳ್ಳಬೇಕು ಹಾಗೆ ಮಾಡಿದ್ರೆ ಗಂಡು ಮಗುವಾಗುತ್ತದೆ ಎಂದು ನಂಬಿಸಿದ್ದಾನೆ. ಅದಕ್ಕಾಗಿ ಒಂದು ಒಳ್ಳೆಯ ಮುಹೂರ್ತ ನಿಗದಿ ಮಾಡಿ ಮನೆಯಚವರ ಸಮ್ಮುಖದಲ್ಲಿ ಗರ್ಭಿಣಿ ತಲೆಗೆ ಮೊಳೆ ಹೊಡೆದಿದ್ದಾನೆ. ನೋವಿನಿಂದು ಗರ್ಭಿಣಿ ವಿಲವಿಲ ಒದ್ದಾಡಿದ್ದಾಳೆ. ಮೊ:ಎ ಹೊರತೆಗೆಯಲು ಮನೆಯವರು ಎಷ್ಟೇ ಪ್ರಯತ್ನಿಸದರೂ ಸಾಧ್ಯವಾಗದ ಕಾರಣ, ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಮೊಳೆಯನ್ನು ವೈದ್ಯರು ಹೊರತೆಗೆದು ಮೊಳೆ ಮೆದುಳಿಗೆ ತಗಲದ ಕಾರಣ ಪ್ರಾಣಾಪಾಯ ಇಲ್ಲ ಎಂದಾಗ ಮಹಿಳೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದೆಲ್ಲಾ ಹೇಗಾಯ್ತು ಎಂದು ವೈದ್ಯರ ಪ್ರಶ್ನೆಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾರೆ. ವಿಚಾರ ಕೇಳಿ ವೈದ್ಯರಿಗೇ ದಂಗು ಬಡಿದಂತಾಗಿದೆ. ಹೆಣ್ಣು ಮಗುವಿಗಾಗಿ ಹಿಂಗೆಲ್ಲಾ ಮಾಡೋದಾ ಅಂತ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯ ಕಾರಣಕರ್ತ ನಕಲಿ ಬಾಬಾ ವಿಚಾರ ತಿಳಿಯುತ್ತಿದ್ದಂತೆ ಕಾಲ್ಕಿತ್ತಿದ್ದಾನೆ. ಪೊಲೀಸರು ಪ್ರಸ್ತು ನಕಲಿ ಬಾಬಾ ಗಾಗಿ ಹುಡುಕಾಟ ನಡೆಸಿದ್ದಾರೆ.