MUSKAN KHAN; ಮಾಲೇಗಾಂವ್ ಉರ್ದು ಘರ್‌ಗೆ ಮಂಡ್ಯದ ಮುಸ್ಕಾನ್ ಖಾನ್ ಹೆಸರು!
ಮಾಲೇಗಾಂವ್: ಹಿಜಾಬ್ ಹೋರಾಟದ ಭಾಗವಾಗಿ ಕೇಸರಿ ಶಾಲು ಹಾಕಿಕೊಂಡು ಕೂಗುತ್ತಿದ್ದ ಹತ್ತಾರು ಹುಡುಗರನ್ನು ಎದುರಿಸಿ, ಅಲ್ಲಾ ಹು ಅಕ್ಬರ್ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ದೇಶದೆಲ್ಲಡೆ ಚರ್ಚೆಯಲ್ಲಿದ್ದಾರೆ. ಅಲ್ಪಸಂಖ್ಯಾತರ ಸಂಘಟನೆಯೊಂದು ಮುಸ್ಕಾನ್ ಖಾನ್‌ಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ಇದೀಗ, ಮಹಾರಾಷ್ಟ್ರದ ಮಾಲೇಗಾಂವ್ ಮೇಯರ್, ಮುಸ್ಕಾನ್ ಖಾನ್‌ಗೆ ವಿಶೇಷ ಗೌರವ ನೀಡಿದ್ದಾರೆ. ಮಾಲೇಗಾಂವ್‌ನಲ್ಲಿರುವ ಉರ್ದು ಘರ್‌ಗೆ ಮುಸ್ಕಾನ್ ಖಾನ್ ಹೆಸರಿಡಲು ತೀರ್ಮಾನಿಸಿರುವುದಾಗಿ ಮಾಲೇಗಾಂವ್ ಮೇಯರ್ ತಹೇರಾ ಶೇಖ್ ರಶೀದ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ತಹೇರಾ ಶೇಖರ್ ರಶೀದ್, ಮುಸ್ಕಾನ್ ಖಾನ್ ಧೈರ್ಯಶಾಲಿ ಹುಡುಗಿ. ಹಿಜಾಬ್ ನಮ್ಮ ಮೂಲಭೂತ ಹಕ್ಕು. ಅದನ್ನು ರಕ್ಷಿಸಿಕೊಳ್ಳಲು ಮುಸ್ಕಾನ್ ಖಾನ್ ಧೈರ್ಯವಾಗಿ ಹೋರಾಡಿದ್ದಾರೆ. ಹೀಗಾಗಿ ಆಕೆಯ ಹೆಸರನ್ನು ಮಾಲೇಗಾಂವ್‌ನಲ್ಲಿರುವ ಉರ್ದು ಘರ್‌ಗೆ ಇಟ್ಟು ಅವರನ್ನು ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.