Bengaluru

ಫೆಬ್ರವರಿ 14ರಿಂದ ಹೈಸ್ಕೂಲ್ ಆರಂಭ:2ನೇ ಹಂತದಲ್ಲಿ ಕಾಲೇಜು ತೆರೆಯಲು ಚಿಂತನೆ-ಸಿಎಂ

ಬೆಂಗಳೂರು: ಹೈಕೋರ್ಟ್‌ ಮೌಖಿಕ ಆದೇಶ ನೀಡುತ್ತಿದ್ದಂತೆ ಸರ್ಕಾರ ಫ್ರೌಢಶಾಲೆ ಆರಂಭ ಮಾಡಲು ತೀರ್ಮಾನಿಇಸದೆ ಇಂದು ಸಂಜೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ್‌ ಬೊಮ್ಮಾಯಿ ಕೆಲವು ದಿನಗಳಿಂದ ಶಾಲಾ ಸಮವಸ್ತ್ರ ಬಗ್ಗೆ ಗೊಂದಲ ಗಲಭೆ ಸೃಷ್ಟಿಯಾಗಿತ್ತು. ಈ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತ್ತು ಹಿಜಾಬ್‌ ಮತ್ತು ಕೇಸರಿ ಶಾಲು ನಡುವೆ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣದಿಂದ ಎಲ್ಲರೂ ಶಾಂತಿಯಿಂದ ಇರಬೇಕೆಂದು ಮನವಿ ಮಾಡಿಕೊಂಡಿದ್ದೆ.

ಮಕ್ಕಳಲ್ಲಿ ಗೊಂದಲ ಕಡಿಮೆ ಆಗಿದೆ ಕಳೆದೆರಡು ದಿನಗಳಿಂದ ಅಹಿತಕರ ಘಟನೆ ನಡೆದಿಲ್ಲ ಎಂಬುದೇ ಸಮಾಧಾನದ ಸಂಗತಿ ಎಂದಿದ್ದಾರೆ.  ಹೊರಗಡೆಯಿಂದ ಪ್ರಚೋದನೆ ನೀಡುವ ಕೆಲಸ ನಡೀತಿದೆ. ಅದು ಕಡಿಮೆ ಆಗಬೇಕೆಂದು ನಾನು ಬೆಳಗ್ಗೆಯೇ ಹೇಳಿದ್ದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಸಂಯಮದಿಂದ ವರ್ತಿಸುತ್ತಿದ್ದಾರೆ ಅದಕ್ಕೆ ನನ್ನ ಪ್ರೀತಿದಾಯಕ ಧನ್ಯವಾದ.

ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಧಾರ್ಮಿಕ ಉಡುಗೆ ತೊಡದಂತೆ ಸೂಚನೆ ನೀಡಿದೆ. ಶಾಲಾ-ಕಾಲೇಜು ಪ್ರಾರಂಭಕ್ಕೆ ಕೂಡ ಅನುಮತಿ ನೀಡಿದೆ. ಕಾಲೇಜುಗಳಲ್ಲಿ ಶಾಂತಿ ಪಾಲನೆ ಮಾಡಬೇಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಈ ತೀರ್ಮಾನ ಮಾಡಿದ್ದೇವೆ ಫೆಬ್ರವರಿ 14ರಂದು 10ನೇ ತರಗತಿವರೆಗೂ ಶಾಲೆಗಳನ್ನು ತೆರೆಯುತ್ತೇವೆ. ಎರಡನೇ ಹಂತದಲ್ಲಿ ಪಿಯುಸಿ ಕಾಲೇಜು ತೆರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾಳೆ ಸಂಜೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಲ್ಲಿನ ವರದಿ ಪಡೆದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ತಿಳಿಸಿದ್ದಾರೆ.

Share Post