ಜಮ್ಮು-ಕಾಶ್ಮೀರದಲ್ಲಿ ಮತ್ತೆ ಲಘು ಭೂಕಂಪ; ಆತಂಕದಲ್ಲಿ ಜನ
ಶ್ರೀನಗರ: ಕಳೆದ ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಭೂಕಂಪನವಾಗಿತ್ತು. ಇದೀಗ ಮತ್ತೆ ಅಲ್ಲಿ ಸಣ್ಣದಾಗಿ ಭೂಮಿ ಕಂಪಿಸಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಗುಲ್ಮಾರ್ಗ್ ಸುತ್ತಮುತ್ತ ಪ್ರದೇಶಗಳಲ್ಲಿ ಭೂ ಕಂಪಿಸಿದೆ. ಬಂಡಿಪೋರಾ, ಗಂದರ್ಬಲ್, ಸೋಪುರೆ, ರಾಜೌರಿ ಮುಂತಾದ ಕಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಕೆಲಕಾಲ ಆತಂಕಗೊಂಡಿದ್ದರು.
ಪಾಕಿಸ್ತಾನದ ಗಿಲ್ಗಿಟ್ ಬಳಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಭೂ ವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದ ತೀವ್ರತೆ 3.8 ರಷ್ಟು ದಾಖಲಾಗಿದೆ. ಆದ್ರೆ, ಘಟನೆಯಲ್ಲಿ ಯಾವುದೇ ಅನಾಹುತ ನಡೆದಿಲ್ಲ. ಸಣ್ಣ ಕಂಪನವಾಗಿದೆ ಅಷ್ಟೇ ಎಂದು ಜಮ್ಮು-ಕಾಶ್ಮೀರದ ಅಧಿಕಾರಿಗಳು ತಿಳಿಸಿದ್ದಾರೆ.