UP ELECTION: ಮಹಿಳೆ ಜೊತೆ ಸಮಾಜವಾದಿ ಪಾರ್ಟಿ ಮುಖಂಡ ಅಸಭ್ಯ ವರ್ತನೆ
ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ಎಲ್ಲಾ ಪಕ್ಷಗಳೂ ಪ್ರಚಾರದ ಭರಾಟೆಯಲ್ಲಿ ತೊಡಗಿವೆ. ಈ ಬೆನ್ನಲ್ಲೇ ಸಮಾಜವಾದಿ ಪಾರ್ಟಿ ಮುಖಂಡರೊಬ್ಬರು, ಪ್ರಚಾರದ ಮೇಲೆ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತೆಯೊಂದಿಗೆ ಬೀದಿಯಲ್ಲಿ ಸಮಾಜವಾದಿ ಪಾರ್ಟಿ ಮುಖಂಡ ಅಸಭ್ಯವಾಗಿ ವರ್ತಿಸಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನು ಈ ವಿಡಿಯೋವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂತವರ ಜೊತೆ ಉತ್ತರ ಪ್ರದೇಶದ ಜನ ಯಾಕೆ ಹೋಗಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮನೆ ಮನೆ ಪ್ರಚಾರದ ವೇಳೆ ಮುಂದೆ ನಡೆದು ಹೋಗುತ್ತಿದ್ದ ಕಾರ್ಯಕರ್ತೆಯ ಹಿಂದೆ ಬಂದ ಮುಖಂಡರೊಬ್ಬರು, ಆಕೆಯ ಜಡೆಗೆ ಭಿತ್ತಿಪತ್ರ ಅಂಟಿಸಿದ್ದಾರೆ. ಇದ್ರಿಂದಾಗಿ ಸಮಾಜವಾದಿ ಪಾರ್ಟಿ ಕಾರ್ಯಕರ್ತೆ, ಕೊಂಚ ವಿಚಲಿತರಾಗಿದ್ದಾರೆ. ನಂತರ ಹಿಂದೆ ಬರುತ್ತಿದ್ದ ಇತರೆ ಕಾರ್ಯಕರ್ತರ ಜೊತೆ ಸೇರಿದ್ದಾರೆ.