National

ಹಿಜಾಬ್‌ ಪರವಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್

ದೆಹಲಿ: ಭುಗಿಲೆದ್ದಿರುವ ಹಿಜಾಬ್‌ ವಿವಾದ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು ಹಿಜಾಬ್‌ ವಿರುದ್ಧವಾಗಿ ಮಾತನಾಡಿದ್ರೆ, ಕಾಂಗ್ರೆಸ್‌ ನಾಯಕರು ಹಿಜಾಬ್‌ ಪರ ಬ್ಯಾಟ್‌ ಬೀಸುತ್ತಿದ್ದಾರೆ. ಇದು ರಾಜ್ಯದಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಇದೇ ಹೇಳಿಕೆಗಳು ಮುಂದುವರೆದಿವೆ. ಸದ್ಯ ಈ ವಿಚಾರ ನ್ಯಾಯಾಲಯಸದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

ಈ ಬಗ್ಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್‌ ಮಾಡಿ ಹಿಜಬ್‌ ಪರವಾಗಿ ಮಾತನಾಡಿದ್ದಾರೆ. ಯಾವ ಬಟ್ಟೆ ಧರಿಸಬೇಕೆಂದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು, ಬಿಕಿನಾಯದರೂ ಧರಿಸಲಿ, ಮುಸುಕಾದರೂ ಧರಿಸಲಿ, ಜೀನ್ಸ್‌ ಆದರೂ ಹಾಕಲಿ..ಇಲ್ಲ ಹಿಜಾಬ್‌ ಆದರೂ ಹಾಕಲಿ. ಅವರಿಗೆ ಬೇಕಾದ ಬಟ್ಟೆಯನ್ನು ಅವರು ಹಾಕಿಕೊಳ್ಳುತ್ತಾರೆ. ಇದು ಅವರ ಮೂಲಭೂತ ಹಕ್ಕು. ಭಾರತದ ಸಂವಿಧಾನವೇ ಇಂತಹ ಹಕ್ಕನ್ನು ಹೆಣ್ಣುಮಕ್ಕಳಿಗೆ ನೀಡಿದೆ. ಎದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

Share Post