National

ಬಿಹಾರದಲ್ಲೊಬ್ಬ ಹೈಟೆಕ್‌ ಭಿಕ್ಷುಕ; ಸ್ಕ್ಯಾನ್‌ ಮಾಡಿ, ಭಿಕ್ಷೆ ಹಾಕಿ..!

ಬಿಹಾರ: ಡಿಜಿಟಲ್‌ ವ್ಯವಹಾರ ಹೆಚ್ಚಾಗುತ್ತಿದ್ದಂತೆ ಭಿಕ್ಷೆ ಕೂಡಾ ಡಿಜಿಟಲ್‌ ರೂಪದಲ್ಲಿ ಪಡೆಯೋ ಕಾಲ ಬರುತ್ತೇನೋ ಅಂತ ತಮಾಷೆ ಮಾಡೋದನ್ನು ನಾವು ನೋಡೇ ಇದ್ದೇವೆ. ಅದು ಈಗ ನಿಜವಾಗಿದೆ. ಬಿಹಾರದಲ್ಲೊಬ್ಬ ಭಿಕ್ಷುಕ ಹೈಟೆಕ್‌ ಆಗಿ ಭಿಕ್ಷಾಟನೆ ನಡೆಸುತ್ತಿದ್ದಾನೆ. ಕೊರಳಲ್ಲಿ ಫೋನ್‌ ಪೇ ಕ್ಯೂ ಆರ್‌ ಕೋಡ್‌ ನೇತು ಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದಾನೆ.

   ಬಿಹಾರದ ಬೆಟ್ಟಿಯಾ ರೈಲು ನಿಲ್ದಾಣಕ್ಕೆ ಹೋದರೆ ಈ ಹೈಟೆಕ್‌ ಭಿಕ್ಷುಕ ಕಾಣಸಿಗುತ್ತಾನೆ. ಈತನ ಹೆಸ್ರು ರಾಜು. ಈತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌ ಅವರ ಅಭಿಮಾನಿ. ಮೊದಲು ಲಾಲೂ ಪ್ರಸಾದ್‌ ಯಾದವ್‌ ರಂತೆ ಮಿಮಿಕ್ರಿ ಮಾಡುತ್ತಿದ್ದನಂತೆ. ನಂತರ ಮೋದಿ ಡಿಜಿಟಲ್‌ ಇಂಡಿಯಾಗೆ ಕರೆಕೊಟ್ಟ ಮೇಲೆ ಮೋದಿಗೂ ಫ್ಯಾನ್‌ ಆಗಿದ್ದಾನೆ.

ಈಗ ಜನರು ಡಿಜಿಟಲ್‌ ರೂಪದಲ್ಲಿ ವ್ಯವಹಾರ ಹೆಚ್ಚಾಗಿ ನಡೆಸುತ್ತಿದ್ದಾರೆ. ಹೀಗಾಗಿ ಜೇಬಿನಲ್ಲಿ ಚಿಲ್ಲರೆ ಇಟ್ಟಿರುವುದಿಲ್ಲ. ಹೀಗಾಗಿ ಯಾರಿಗೇ  ಭಿಕ್ಷೆ ಕೇಳಿದರೂ, ಚಿಲ್ಲರೆ ಇಲ್ಲ ಎನ್ನುತ್ತಿದ್ದರಂತೆ. ಇದ್ರಿಂದ ಬೇಸತ್ತ ಭಿಕ್ಷುಕ ರಾಜು, ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿಸಿ, ಡಿಜಿಟಲ್‌ ರೂಪದಲ್ಲಿ ಭಿಕ್ಷೆ ಬೇಡಲು ಶುರು ಮಾಡಿದ್ದಾನೆ. ಇದನ್ನು ಕುತೂಹಲದಿಂದ ಗಮನಿಸುವ ಜನರು, ಕ್ಯೂಅರ್‌ ಕೋಡ್‌ ಸ್ಕ್ಯಾನ್‌ ಮಾಡಿ ಭಿಕ್ಷೆ ಹಾಕುತ್ತಿದ್ದಾರಂತೆ.

Share Post