ನಗರದಲ್ಲಿನ ಗುಂಡಿ ರಸ್ತೆ ವಿಚಾರವಾಗಿ ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ನಗರದಲ್ಲಿ ಬಿಬಿಎಂಪಿ ನಿರ್ಮಿಸಿದ ರಸ್ತೆಗಳಲ್ಲಿ ಯುಮರೂಪಿ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಹೈಕೋರ್ಟ್‌ಗೆ ಹಾಜರಾಗಿದ್ದಾರೆ. ಈ ವೇಳೆ ಬಿಬಿಎಂಪಿ ಕೈಗೊಂಡಿರುವ ಕೆಲಸದ ಬಗ್ಗೆ ಕೋರ್ಟ್ ಅತೃಪ್ತಿ ತೋರಿದೆ. ನೀವು ನಿರ್ಮಿಸಿರುವ ರಸ್ತೆಯಲ್ಲಿ ಒಂಭತ್ತು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂಜಿನಿಯರ್‌ಗಳು ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದಾರೆ.
ಮಳೆಗಾಲದ ನಂತರ ರಸ್ತೆಗಳಲ್ಲಿ ಗುಂಡಿಯೇಕೆ ಬೀಳ್ತಿವೆ..?ಡಾಂಬರು ಗುಣಮಟ್ಟ ಕಾಪಾಡದವರ ವಿರುದ್ಧ ರೂಪಿಸಿದ ಕ್ರಮ ಏನು ಎಂದು ಪ್ರಶ್ನಿಸಿದ್ದಾರೆ. ಇಂತಹ ಕೆಟ್ಟ ದುರಸ್ಥಿ ಮಾಡಲು ಎಂತಹ ತಂತ್ರಜ್ಞಾನ ಬಳಸಿದ್ದೀರಿ, ಜನರ ತೆರಿಗೆ ಹಣ ವ್ಯರ್ಥವಾಗುತ್ತಿರುವ ಬಗ್ಗೆ ಆತಂಕವಿದೆ ರಿಪೇರಿಯಾದ ರಸ್ತೆಗಳೇ ಏಕೆ ಮತ್ತೆ ಮತ್ತೆ ಗುಂಡಿ ಬೀಳ್ತಿವೆ. ಕಳಪೆ ರಸ್ತೆಗಳಿಗೆ ಕಾರಣರದ ಅಧಿಕಾರಿಗಳನ್ನು ಬಿಡುವ ಮಾತೇ ಇಲ್ಲ ಎಂದು ಸಿಜೆ ರಿತುರಾಜ್ ಅವಸ್ತಿ ಎಚ್ಚರಿಕೆ ನೀಡಿದ್ದಾರೆ.
ಹೈಕೋರ್ಟ್ ಪ್ರಶ್ನೆಗೆ ಗುಂಡಿ ಮುಚ್ಚುವ ಯಂತ್ರ ಬಳಸಿದ ಮೊದಲ ಸಂಸ್ಥೆ ಅಂದ್ರೆ ಅದು ಬಿಬಿಎಂಪಿ ಎಂದು ಉತ್ತರ ನೀಡಿದ್ದಾರೆ. ಬಿಬಿಎಂಪಿ ವಕೀಲರ ಸಮರ್ಥನೆಗೆ ಕೆಂಡಾಮಂಡಲರಾದ ನ್ಯಾಯಮೂರ್ತಿ ಬಿಬಿಎಂಪಿ ಯೋಗ್ಯತೆ ಏನೆಂದು ಎಲ್ಲರಿಗೂ ತಿಳಿದಿದೆ. ಈ ತಂತ್ರಜ್ಞಾನ ಬಳಸಿದ ನಗರವೆಂದು ಹೇಳಿಕೊಳ್ತಿರಿ. ನೀವು ಯಾಂತ್ರಿಕ ಗುಂಡಿ ಮುಚ್ಚುವ ಯಂತ್ರ ಬಳಸಿದ್ದೀರಾ..?ಎಂಬ ಹೈಕೋರ್ಟ್ ಕೇಳಿದ ಪ್ರಶ್ನೆಹಗೆ ಒಮ್ಮೆ ಹೌದು..ಇನ್ನೊಮ್ಮೆ ಇಲ್ಲ ಎಂಬ ಗೊಂದಲ ಉತ್ತರ ನೀಡಿದ್ದಾರೆ.
ಗೊಂದಲ ಉತ್ತರ ನೀಡಿದ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್‌ಗೆ ಹೈಕೋರ್ಟ್ ವಾರ್ನ್ ಮಾಡಿದೆ. ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಿದರೆ ಹುಷಾರ್ ಇಲ್ಲಿಂದಲೇ ನಿಮ್ಮನ್ನು ಜಥಲೊಗೆ ಕಳಿಸುತ್ತೇವೆ. ನೀವು ನ್ಯಾಯಾಲದಲ್ಲಿದ್ದೀರಾ ಎಂಬ ಎಚ್ಚರವಿರಲಿ ಎಂದು ಮುಖ್ಯ ಇಂಜಿನಿಯರ್‌ಗೆ ಸಿಜೆ ರಿತುರಾಜ್ ಅವಸ್ತಿ ತರಾಟೆಗೆವ ತೆಗೆದುಕೊಂಡಿದ್ದಾರೆ.