Bengaluru

ಹಿಜಾಬ್‌ ವಿಚಾರದಲ್ಲಿ ಬಿಜೆಪಿ ರಾಜಕೀಯ; ಸಿದ್ದರಾಮಯ್ಯ

ಬೆಂಗಳೂರು: ಹಿಜಾಬ್‌, ಕೇಸರಿ ಶಾಲು ವಿವಾದವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ದೊಡ್ಡ ವಿವಾದವೆಬ್ಬಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯಕ್ಕಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಲಾಗುತ್ತಿದೆ. ವಿಚಾರ ಕೋರ್ಟ್‌ ಬಳಿ ಇದೆ. ನಾಳೆ ಕೋರ್ಟ್‌ ಆದೇಶ ನೀಡಲಿದೆ. ನೋಡೋಣ ಕೋರ್ಟ್‌ ಏನು ಆದೇಶ ಕೊಡುತ್ತದೋ ಅಂತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

Share Post