ಲತಾ ಮಂಗೇಶ್ಕರ್ ಅವರ ಚಿತಾಭಸ್ಮ ಪಡೆದ ಸೋದರಳಿಯ ಆದಿನಾಥ್ ಮಂಗೇಶ್ಕರ್
ಮುಂಬೈ: ಲೆಜೆಂಡರಿ ಗಾಯಕಿ ಲತಾಮಂಗೇಶ್ಕರ್ ಅವರ ಚಿತಾಭಸ್ಮವನ್ನು ಅವರ ಸೋದರಳಿಯ ಆದಿನಾಥ್ ಮಂಗೇಶ್ಕರ್ ಅವರು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಂಗ್ರಹ ಮಾಡಿದ್ರು, ನಿನ್ನೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸಹಸ್ರ ಅಭಿಮಾನಿಗಳನ್ನು ಅಗಲಿ ಸ್ವರ್ಗಲೋಕಕ್ಕೆ ತೆರಳಿದ್ರು. ಭಾನುವಾರ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಸೇರಿದಂತೆ ಅನೇಕ ಗಣ್ಯರು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಗಾನ ಕೋಗಿಲೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು.
ಇಂದು ಲತಾ ಮಂಗೇಶ್ಕರ್ ಅವರ ಚಿತಾಭಸ್ಮ ಸಂಗ್ರಹಿಸಲು ಅವರ ಸೋದರಳಿಯ ಆದಿನಾಥ್ ಮಂಗೇಶ್ಕರ್ ಶಿವಾಜಿ ಪಾರ್ಕ್ಗೆ ಭೇಟಿ ನೀಡಿ ಚಿತಾಭಸ್ಮವನ್ನು ಪಡೆದರು. ಕೆಂಪು ಬಟ್ಟೆಯಿಂದ ಮುಚ್ಚಿದ ಚಿತಾಭಸ್ಮವನ್ನು ಪಡೆದು ಅಲ್ಲಿಂದ ವಾಪಸಾದ್ರು. ಹಿಂದೂ ಸಂಪ್ರದಾಯದ ಪ್ರಕಾರ, ಸತ್ತವರ ಚಿತಾಭಸ್ಮವನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಪವಿತ್ರ ನದಿಗೆ ಬಿಡಲಾಗುತ್ತದೆ. ಹಾಗೆಯೇ ಲತಾ ಮಂಗೇಶ್ಕರ್ ಅವರ ಚಿತಾಭಸ್ಮವನ್ನು ಕೂಡ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೂ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಇಂದು ಕೂಡ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ದೇಶಾದ್ಯಂತ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.