ನೆಹರೂಗೆ ಕಣ್ಣೀರು ತರಿಸುವಂತೆ ಹಾಡಿದ್ದ ಲತಾ ಮಂಗೇಶ್ಕರ್
ಜವಹರ ಲಾಲ್ ನೆಹರೂ ಎಂದೂ ಬಹಿರಂಗವಾಗಿ ಕಣ್ಣೀರಿಟ್ಟಿರಲಿಲ್ಲವಂತೆ. ಹಾಗೆ ಬಹಿರಂಗವಾಗಿ ಅಳುವವರನ್ನು ಕಂಡರೆ ಜವಹರ ಲಾಲ್ ನೆಹರೂ ಅವರಿಗೆ ಆಗುತ್ತಿರಲಿಲ್ಲವಂತೆ. ಆದ್ರೆ ಇಂತಹ ಜವಹರ ಲಾಲ್ ನೆಹರೂ ಒಂದು ದಿನ ಬಹಿರಂಗವಾಗಿ ಕಣ್ಣೀರಿಟ್ಟಿದ್ದರು. ಅದಕ್ಕೆ ಕಾರಣ ಲತಾ ಮಂಗೇಶ್ಕರ್ ಅವರ ಹಾಡು.
ಹೌದು, 1963 ಜನವರಿ 27ರಂದು ಲತಾ ಮಂಗೇಶ್ಕರ್ ಅವರು ಕವಿ ಪ್ರದೀಪ್ ಅವರು ಬರೆದಿರುವ ʻಯೇ ಮೇರೆ ವತನ್ ಕೇ ಲೋಗೋಂʼ ಹಾಡು ಹಾಡಿದಾಗ ಜವಹರ ಲಾಲ್ ನೆಹರೂ ಕಣ್ಣೀರು ಹಾಕದೇ ಇರಲಾಗಲಿಲ್ಲವಂತೆ.
ಹಾಡು ಪೂರ್ತಿಯಾದ ಮೇಲೆ ಸ್ಟೇಜ್ ಹಿಂದೆ ಲತಾ ಮಂಗೇಶ್ಕರ್ ಕಾಫಿ ಕುಡಿಯುತ್ತಿದ್ದಂರಂತೆ. ಅಲ್ಲಿಗೆ ಬಂದ ನಿರ್ದೇಶಕ ಮೆಹಬೂಬ್ ಖಾನ್, ನಿಮ್ಮನ್ನು ಪಂಡಿತ್ ಜೀ ಕರೆಯುತ್ತಿದ್ದಾರೆ ಎಂದು ಹೇಳಿದರಂತೆ.
ನಂತರ ಲತಾ ಅವರನ್ನು ಮೆಹಬೂನ್ ಖಾನ್, ಜವಹರ ಲಾಲ್ ನೆಹರು ಅವರ ಬಳಿ ಕರೆದುಕೊಂಡು ಬರುತ್ತಾರೆ. ಆಗ ʻನಮ್ಮ ಲತಾ ಹಾಡಿದ ಹಾಡು ಹೇಗಿತ್ತುʼ ಎಂದು ಮೆಹಬೂನ್ ಖಾನ್ ನೆಹರೂ ಅವರನ್ನು ಕೇಳುತ್ತಾರೆ. ಆಗ ನೆಹರೂ ಅವರು, ʻತುಂಬಾ ಚೆನ್ನಾಗಿತ್ತು, ಈ ಹುಡುಗಿ ನನ್ನ ಕಣ್ಣುಗಳಲ್ಲಿ ನೀರು ತರಿಸಿದಳುʼ ಎಂದು ಅಪ್ಪಿಕೊಂಡು ಲತಾ ಅವರನ್ನು ನೆಹರೂ ಅಭಿನಂದಿಸಿದರಂತೆ.
ನಂತರ ಆ ಹಾಡಿನ ಟೇಪ್‌ನ್ನು ವಿವಿಧ ಭಾರತಿ ಸ್ಟೇಷನ್‌ಗೆ ಕಳುಹಿಸುತ್ತಾರೆ. ನಂತರ ಈ ಹಾಡು ದೇಶಾದ್ಯಂತ ನೇಷನಲ್ ರೇಜ್ ಆಗುತ್ತದೆ. ಇನ್ನು 1964ರಲ್ಲಿ ನೆಹರೂ ಮುಂಬೈಗೆ ಬರುತ್ತಾರೆ. ಆಗ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಮತಾ ಮಂಗೇಶ್ಕರ್, ನೆಹರೂ ಎದುರು, ಆರ್ಜೂ ಸಿನಿಮಾದಲ್ಲಿನ ಒಂದು ಹಾಡು ಹಾಡುತ್ತಾರೆ. ಆಗ ನೆಹರೂ ಲತಾ ಅವರಿಗೆ ಒಂದು ಚೀಟಿ ಕಳುಹಿಸುತ್ತಾರೆ. ಅದರಲ್ಲಿ ʻಯೇ ಮೇರೆ ವತನ್ ಕೇ ಲೋಗೋಂʼ ಹಾಡು ಮತ್ತೆ ಕೇಳಬೇಕೆಂದಿದೆ ಎಂದು ಬರೆದಿರುತ್ತದೆ. ನೆಹರೂ ಮನವಿಗೆ ಸ್ಪಂದಿಸಿದ ಲತಾ ಮಂಗೇಶ್ಕರ್, ಪೂರ್ತಿ ಹಾಡನ್ನು ಹಾಡಿ ನೆಹ್ರೂರವರ ಮನಸೂರೆಗೊಳ್ಳುತ್ತಾರೆ.