Districts

ದೇಶದ್ರೋಹ ಕೇಸ್‌ನಡಿ ಜಮೀರ್‌, ಖಾದರ್‌ನ ಒಳಗೆ ಹಾಕಿ-ಸೊಗಡು ಶಿವಣ್ಣ

ತುಮಕೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿದ್ದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ನಾವೇನು ಆಫ್ಘಾನಿಸ್ತಾನದಲ್ಲಿದ್ದೇವಾ ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿರುವ ಬುರ್ಖಾ ಸಂಸ್ಕೃತಿಯನ್ನು ಕಿತ್ತೊಗೆಯಬೇಕು. ರಾಜ್ಯವನ್ನು ತಾಲಿಬಾನ್‌, ಆಫ್ಗನ್‌ ಆಗೋಕೆ ನಾವು ಬಿಡಲ್ಲ ಸಿದ್ಧರಾಮಯ್ಯನವರಿಗೆ ನಾಚಿಕೆ ಆಗಬೇಕು, ದೇಶದ್ರೋಹ ಕೇಸ್‌ ಹಾಕಿ ಜಮೀರ್‌ ಅಹ್ಮದ್‌ ಹಾಗೂ ಯು.ಟಿ.ಖಾದರ್‌ ಅವರನ್ನು ಒಳಗೆ ಹಾಕಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಕಾರಿದ್ದಾರೆ.

ಹಿಜಾಬ್‌ ಧರಿಸಿ ಬರುವುದರಿಂದ ಏನೆಲ್ಲಾ ಅನಾಹುತ ಆಗುತ್ತೆ ಗೊತ್ತಾ..ಹಿಜಾಬ್‌ ಹಾಕಿಕೊಂಡು ಪರೀಕ್ಷೆಯಲ್ಲಿ ಕಾಪಿ ಮಾಡಬಹುದು. ಮುಳ ಮುಚ್ಚಿಕೊಂಡು ಪರೀಕ್ಷೆಯನ್ನೂ ಬರೆಯಬಹುದು. ಯಾವ ವಿದ್ಯಾರ್ಥಿ ಬಂದು ಪಾಠ ಕೇಳ್ತಿದಾರೆ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಹಿಜಾಬ್‌, ಬುರ್ಖಾ ಎರಡನ್ನೂ ರಾಜ್ಯದಲ್ಲಿ ಬ್ಯಾನ್‌ ಮಾಡಿ. ಶಾಲೆಗಳಲ್ಲಿ ಏಕವಸ್ತ್ರ ನೀತಿ ಸಂಹಿತೆ ಜಾರಿಯಾಗಬೇಕು ಎಂದು ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

Share Post