BengaluruDistricts

ಹಿಜಾಬ್ ಬ್ಯಾನ್‌..ಬ್ಯಾನ್..ಬ್ಯಾನ್…ಕೇಸರಿ ನಾಯಕರ ರಣಕಹಳೆ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್/ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಕೇಸರಿ ನಾಯಕರು ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ತಿಗಳು ಯಾವುದೇ ಕಾರಣಕ್ಕೂ ಹಿಜಾಬ್‌ ಧರಿಸುವಂತಿಲ್ಲ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇದೆ. ಯಾವ ಗೊಂದಲವೂ ಇಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಹಿಜಾಬ್‌ ಹೆಸರಿನಲ್ಲಿ ಧರ್ಮಾಂಧತೆಯನ್ನು ವಿರೋಧಿಸುತ್ತೇವೆ ಇದನ್ನು ಹೊರಗಿನ ಮತಾಂಧ ಶಕ್ತಿಗಳು ಮಾಡ್ತಿವೆ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಾಗಿ ಕೇಸರಿ ಸಾಲು ಧರಿಸಿದ್ದಾರೆ. ಒಂದು ತಪ್ಪಾದ್ರೆ ಇನ್ನೊಂದು ಕೂಡಾ ತಪ್ಪೆ ಅಲ್ವೇ..ಏನಾದ್ರು ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಇರಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದ್ದಾರೆ.

ತಾಲಿಬಾನ್‌ ಆಗಲು ನಾವು ಬಿಡಲ್ಲ ಎಂದು ಕಟೀಲ್

ಸರ್ಕಾರಿ ಕಾಲೇಜುಗಲ್ಲಿ ಹಿಜಾವ್‌ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ನಾವು ರಾಜ್ಯವನ್ನು ತಾಲಿಬಾನ್‌ ಆಗಲು ಬಿಡಲ್ಲ ಎಂದಿದ್ದಾರೆ. ಇಲ್ಲಿನ ನಿಯಮ, ನಿರ್ದಾರಗಳಿಗೆ ಪೂರಕವಾಗಿ ಇರಬೇಕು. ಈ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಹಿಜಾಬ್‌ ಅಥವಾ ಯಾವುದೇ ರೀತಿಯ ಘಟನೆಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿನ ಶಾಲೆಗಳಲ್ಲಿ ಶಿಕ್ಷಣ ಸಾಧ್ಯವಿಲ್ಲದವರು ಬೇರೆಡೆ ಹೋಗಲಿ ಹಿಜಾಬ್‌ ಧರಿಸಲು ನಮ್ಮ ಸರ್ಕಾರ ಅನುಮತಿ ಕೊಡುವುದಿಲ್ಲ, ಶಾಲೆಗಳ ನಿಯಮಕ್ಕೆ ಅನುಸಾರವಾಗಿ ಎಲ್ಲವೂ ನಡೆಯಲಿದೆ ಎಂದು ಮಂಗಳೂರಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

Share Post