ಶ್ರೀನಗರದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ; ಇಬ್ಬರು ಉಗ್ರರ ಹತ್ಯೆ
ಶ್ರೀನಗರ: ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ ನಲ್ಲಿ ಲಷ್ಕರ್ ಇ ತೋಯ್ಬಾದ ಅಂಗ ಸಂಸ್ಥೆ ಟಿಆರ್ಎಫ್ನ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಶ್ರೀನಗರದ ಜಕುರಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಕಾರ್ಯಾಚರಣೆ ನಡೆದಿದೆ.
ಕಟ್ಟಡವೊಂದರಲ್ಲಿ ಉಗ್ರರು ಅಡಗಿದ್ದರು. ಈ ವೇಳೆ ದಾಳಿ ಮಾಡಲಾಗಿದೆ. ಹತ್ಯೆಗೀಡಾದವರಲ್ಲಿ ಇಬ್ಬನ ಹೆಸರು ಇಖ್ಲಾಕ್ ಹಜಂ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗೆ ಅನಂತ್ನಾಗ್ನ ಹಸನ್ಪೋರಾದಲ್ಲಿ ನಡೆದ ಹೆಡ್ಕಾನ್ಸ್ಟೇಬಲ್ ಅಲಿ ಮೊಹಮ್ಮದ್ ಹತ್ಯೆಯಲ್ಲಿ ಇಖ್ಲಾಕ್ ಭಾಗಿಯಾಗಿನೆಂದು ಗೊತ್ತಾಗಿದೆ. ಕಾರ್ಯಾಚರಣೆಯ ಸ್ಥಳದಿಂದ ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.