Bengaluru

ಪರಿಸ್ಥಿತಿ ಕೈ ಮೀರುವ ಮುನ್ನ ಸಮಸ್ಯೆ ಸರಿಪಡಿಸಿ: ಸಿಎಂಗೆ ತನ್ವೀರ್‌ ಸೇಠ್‌ ಪತ್ರ

ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ಸಮಸ್ಯೆ ಬಗೆಹರಿಸಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಹಿಜಾಬ್‌ ವಿವಾದ ಭುಗಿಲೆದ್ದಿದೆ. ಅಲ್ಪಸಂಖ್ಯಾತ ಮಕ್ಕಳು ಮತೃಭಾಷೆ ಮಾತಾಡುವುದಕ್ಕೆ ನಿಷೇಧ ಹಾಕಿದ್ದಾರೆ ಇದು ಆಕ್ಷೇಪಣೀಯವೆಂದು ತನ್ವೀರ್‌ ಸೇಠ್‌ ಸ್ಪಷ್ಟಪಡಿಸಿದ್ದಾರೆ.

ಇಸ್ಲಾಂನಲ್ಲಿ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಸಾಮಾನ್ಯ, ಸಿಖ್ಖರು ಪೇಟ, ಕ್ರೈಸ್ತ ಸನ್ಯಾಸಿನಿಯರು ಸ್ಕಾರ್ಪ್‌ ಧರಿಸುತ್ತಾರೆ. ಇದು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ ಇದಕ್ಕಲ್ಲ ಇದುವರೆಗೂ ಯಾವುದೇ ನಿಷೇಧ, ತಡೆಯಾಜ್ಞೆ ಇರಲಿಲ್ಲ. ಅನೇಕ ಸಂಘಟನೆಗಳು ವೈಭವೀಕರಿಸಿ ಜನರ ದಾರಿ ತಪ್ಪಿಸುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಡಿಸಿ ಲಾಭ ಪಡೆಯಲು ಯತ್ನಿಸುತ್ತಿವೆ. ಸರ್ಕಾರ ಇದಕ್ಕೆ ಆಸ್ಪದ ಕೊಡದೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿಯವರಿಗೆ ತನ್ವೀರ್‌ ಸೇಠ್‌ ಒತ್ತಾಯ ಮಾಡಿದ್ದಾರೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸ, ರಕ್ಷಣೆಗಾಗಿ ಕಾನೂನು ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾನೂನು ಜಾರಿಗೆ ತಂದಿದೆ. ಹೆಣ್ಣುಮಕ್ಕಳ ರಕ್ಷಣೆ, ವಿದ್ಯಾಭ್ಯಾಸ ಸರ್ಕಾರದ ಹೊಣೆಯಾಗಿದೆ. ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಭೇದಭಾವ ಮಾಡ್ತಿದ್ದಾರೆ. ಇದು ವಿದ್ಯಾರ್ಥಿಗಳ ಮನಸ್ಸಲ್ಲಿ ಧರ್ಮ, ಜಾತಿಯನ್ನು ಹುಟ್ಟುಕಾಲು ಅಡಿಪಾಯ ಹಾಕಿದಂತಾಗುತ್ತದೆ. ಇದು ಬಹಳ ಆತಂಕಕಾರಿ ಬೆಳವಣಿಗೆ, ಸಮಾಜಕ್ಕೆ ಒಳ್ಳೆಯದಲ್ಲ ಮಾರಣಾಂತಿಕವಾಗಿ ಮಾರ್ಪಾಡಾಗಬಹುದು. ಸಮಾಜದ ಹಿತದೃಷ್ಟಿಯಿಂದ ಕಾಲೇಜಿನ ಪ್ರಾಂಶುಪಾಲರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದು ಮಾಜಿ ಶಾಸಕ ತನ್ವೀರ್‌ ಸೇಠ್‌ ಮತ್ರದಲ್ಲಿ ಮನವಿ ಮಾಡಿದ್ದಾರೆ.

Share Post