ಚಾರ್ಮಿನಾರ್ ಬಳಿ ಎಂಐಎಂ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ
ಹೈದರಾಬಾದ್: ಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಕಾರಿನ ಮೇಲೆ ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ಹೈದರಾಬಾದ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನದ ಪ್ರಾರ್ಥನೆಯ ನಂತರ ಚಾರ್ಮಿನಾರ್ ಪಕ್ಕದಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಎಂಐಎಂ ಕಾರ್ಯಕರ್ತರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಚಾರ್ಮಿನಾರ್ ಪಕ್ಕದಲ್ಲಿ ಮೆಕ್ಕಾ ಮಸೀದಿ ಹಾಗೂ ಭಾಗ್ಯಲಕ್ಷ್ಮೀ ದೇವಸ್ಥಾನ ಇದೆ. ಈ ಎರಡೂ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಹಲವು ಭದ್ರತಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಎಂಐಎಂ ಅಭ್ಯರ್ಥಿಗಳ ಪರ ಅಸಾದುದ್ದಿನ್ ಒವೈಸಿ ಪ್ರಚಾರ ನಡೆಸಿ ಹಿಂತಿರುಗುತ್ತಿದ್ದಾಗ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಆದ್ರೆ ಒವೈಸಿ ಅಪಾಯದಿಂದ ಪಾರಾಗಿದ್ದಾರೆ. ಇದನ್ನು ಎಂಐಎಂ ಪಕ್ಷದ ನಾಯಕರು ಖಂಡಿಸಿದ್ದಾರೆ.