ಪಾಕ್ನಲ್ಲಿ ಡೆಂಗ್ಯೂ ಜ್ವರಕ್ಕೆ ಜನ ತತ್ತರ: ಪ್ಯಾರಸಿಟಮಾಲ್ ಕೊರತೆ
ಪಾಕಿಸ್ತಾನ: ಪಾಕಿಸ್ತಾನದಲ್ಲಿಡೆ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿದೆ. ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಿದೆ. ಒಂದೆಡೆ ಕೊರೊನಾ.. ಇನ್ನೊಂದೆಡೆ ಡೆಂಗ್ಯೂ ಪ್ರಕರಣಗಳಿಂದ ಪಾಕಿಸ್ತಾನದ ಜನತೆ ಬೆಚ್ಚಿ ಬೀಳುತ್ತಿದ್ದಾರೆ. ಕೊರೊನಾ ಮತ್ತು ಡೆಂಗ್ಯೂ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ದೇಶದಲ್ಲಿ ಔಷಧಗಳ ಕೊರತೆ ಕೂಡ ಉಂಟಾಗಿದೆ. ಪಾಕಿಸ್ತಾನಿ ಔಷಧಾಲಯಗಳಲ್ಲಿ ಪ್ಯಾರಸಿಟಮಾಲ್ನ ತೀವ್ರ ಕೊರತೆ ಉದ್ಭವಿಸಿದೆ. ಪ್ಯಾರಸಿಟಮಾಲ್ ಮೆಡಿಸಿನ್ ಫಾರ್ಮಸಿಗಳಲ್ಲಿ ಲಭ್ಯವಿಲ್ಲ ಎಂದು ಅಲ್ಲಿನ ಮಾಧ್ಯಮ ಬಹಿರಂಗಪಡಿಸಿದೆ. ಇಂತಹ ತುರ್ತು ಪರಿಸ್ಥಿತಿಯನ್ನು ಎದುರಿಸಲು ಔಷಧಿ ಲಭ್ಯವಿಲ್ಲ ಅಂದ್ರೆ ಹೇಗೆ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಡೆಂಗ್ಯೂ ಪ್ರಕರಣಗಳು ಹೆಚ್ಚಾದಂತೆ ಪ್ಯಾರಸಿಟಮಾಲ್ ಸೇವನೆಯೂ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಪ್ಯಾರಸಿಟಮಾಲ್ ಕೊರತೆ ಉಂಟಾಗಿದೆ ಎಂದು DAWN ವರದಿ ಹೇಳಿದೆ. ಪಾಕಿಸ್ತಾನದ ಹೆಚ್ಚಿನ ಔಷಧಾಲಯಗಳಲ್ಲಿ ಪ್ಯಾರಸಿಟಮಾಲ್ ಲಭ್ಯವಿಲ್ಲ ಮತ್ತು ಈಗ ಬ್ಲಾಕ್ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಪರಿಸತಿತಿ ಎದುರಾಗಿದೆ ಎಂದು DAWN ವರದಿ ಮಾಡಿದೆ.
ಕೋವಿಡ್ ಸಂತ್ರಸ್ತರಿಗೆ ಸಾಮಾನ್ಯವಾಗಿ ಶಿಫಾರಸು ಮಾಡಲಾದ ಔಷಧಿಗಳಲ್ಲಿ ಪ್ಯಾರೆಸಿಟಮಾಲ್ ಒಂದಾಗಿದೆ. ಡೆಂಗ್ಯೂ ಪ್ರಕರಣಗಳ ತೀವ್ರ ಏರಿಕೆಯಿಂದ ಪ್ಯಾರಸಿಟಮಾಲ್ ಕೊರತೆಯು ಉಲ್ಬಣಗೊಂಡಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೋವು ನಿವಾರಕವಾಗಿ ಬಳಸುವ ಪ್ಯಾರಸಿಟಮಾಲ್ಗೆ ಹೆಚ್ಚಿನ ಬೇಡಿಕೆಯಿದೆ ಎಂದು ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾರಸಿಟಮಾಲ್ ತಯಾರಿಸಲು ವಿಫಲವಾದ 15 ಫಾರ್ಮಾ ಕಂಪನಿಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಮತ್ತೊಂದೆಡೆ .. ಪಾಕಿಸ್ತಾನವು ಪ್ರಸ್ತುತ ಕೋವಿಡ್ ಐದನೇ ಅಲೆಯನ್ನು ಎದುರಿಸುತ್ತಿದೆ. ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗಾಗಲೇ ಲಕ್ಷದ ಗಡಿ ದಾಟಿದೆ. ಪಾಕಿಸ್ತಾನವು 9.65% ರ ಪಾಸಿಟಿವಿಟಿ ದರವನ್ನು ಹೊಂದಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 32 ಸಾವು ಸಂಭವಿಸಿವೆ ಎಂದು ರಾಷ್ಟ್ರೀಯ ಕಮಾಂಡ್ ಆಪರೇಷನ್ ಸೆಂಟರ್ (ಎನ್ಸಿಒಸಿ) ತಿಳಿಸಿದೆ.