ರಜನಿ ಪುತ್ರಿ ಐಶ್ವರ್ಯಗೆ ಕೊರೊನಾ ಪಾಸಿಟಿವ್
ಚೆನೈ : ಇತ್ತೀಚೆಗಷ್ಟೇ ಧನುಷ್ ಅವರೊಂದಿಗಿನ ಮದುವೆ ಸಂಬಂಧ ಮುರಿದುಕೊಂಡಿದ್ದ ಐಶ್ವರ್ಯ ಈಗ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಆರೋಗ್ಯದ ಸಮಸ್ಯೆಯಿಂದ ಐಶ್ವರ್ಯ ಬಳಲುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರುದುಕೊಂಡಿದ್ದಾರೆ. ನಿನ್ನೆ ರಾತ್ರಿ ಮಂಗಳವಾರ ಅವರು ಈ ಕುರಿತು ಪೋಸ್ಟ್ ಮಾಡಿದ್ದಾರೆ.
ರಜನಿ ಪುತ್ರಿ ಐಶ್ವರ್ಯ, “ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ. ವ್ಯಾಕ್ಸಿನ್ ಪಡೆದು ಹುಷಾರಾಗಿರಿ” ಎಂದು ಬರೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐಶ್ವರ್ಯ ಅವರಿಗೆ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
View this post on Instagram