BUDGET LIVE UPDATES: ಬಜೆಟ್ ಅಧಿವೇಶನ; ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್
ನವದೆಹಲಿ: ಇಡೀ ದೇಶವೇ ಕುತೂಹಲದಿಂದ ನಿರೀಕ್ಷಿಸುತ್ತಿರುವ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2022-23ನೇ ಸಾಳಿನ ಬಜೆಟ್ ಮುಖ್ಯಾಂಶಗಳು ಇಲ್ಲಿವೆ.
- ಕೊರೊನಾದಿಂದ ಸಂಕಷ್ಟ ಅನುಭವಿಸಿದವರಿಗೆ ನನ್ನ ಅನುಕಂಪವಿದೆ
- ಕೊರೊನಾದಿಂದಾಗಿ ದೇಶದ ಆರ್ಥಿಕತೆ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ
- 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ
- 2022ರಲ್ಲಿ ದೇಶದ ಆರ್ಥಿಕತೆ ಶೇ.9.2ರಷ್ಟು ಚೇತರಿಗೆ ಗುರಿ
- ಡಿಜಿಟಲ್ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ
- ಮುಂದಿನ 25 ವರ್ಷಗಳಿಗೆ ಸರ್ಕಾರದ ನೀಲನಕ್ಷೆ ರೆಡಿ ಮಾಡಿದ್ದೇವೆ
- ಬಡವರಿಗೆ ವಸತಿ ಸೌಲಭ್ಯ ಹಾಗೂ ಬಡವರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ
- ಈ ವರ್ಷ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದ್ದೇವೆ
- ಈ ಬಾರಿಯ ಬಜೆಟ್ನಲ್ಲಿ ಆತ್ಮನಿರ್ಬರತೆಗೆ ಒತ್ತು ನೀಡಲಾಗಿದೆ
- ಶೀಘ್ರದಲ್ಲೇ ಎಲ್ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುತ್ತದೆ
- ಕಲ್ಲಿದ್ದಲು ಕ್ಷೇತ್ರದಲ್ಲಿ ನೂರು ವರ್ಷಗಳ ಅಭಿವೃದ್ಧ ಬಗ್ಗೆ ಗಮನ
- ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗೆ ಹೆಚ್ಚು ಒತ್ತು
- ಏರ್ ಇಂಡಿಯಾ ಮೇಲಿನ ಬಂಡವಾಳ ಹಿಂತೆಗೆತ ಪೂರ್ಣವಾಗಿದೆ
- ಪಿಎಂ ಗತಿ ಶಕ್ತಿ ಯೋಜನೆಗೆ ಏಳು ಎಂಜಿನ್ಗಳು
- ಎಲ್ಲರನ್ನೂ ವರ್ಗದವರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಒತ್ತು ನೀಡಲಾಗಿದೆ
- ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ
- 25 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ
- ಉತ್ಪಾದನಾ ವಲಯಕ್ಕೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ
- ರೈತರಿಗೆ ಒನ್ ಸ್ಟೇಷನ್, ಒನ್ ಪ್ರಾಡಕ್ಟ್ ಯೋಜನೆ
- 400 ಒಂದೇ ಮಾತರಂ ಹೊಸ ರೈಲುಗಳು
- ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ರೈಲುಗಳು ಹಳಿಗೆ ಇಳಿಯಲಿವೆ
- ಮೂರು ವರ್ಷದಲ್ಲಿ ೧೦೦ ಕಾರ್ಗೊ ಟರ್ಮಿನಲ್ ಸ್ಥಾಪನೆ
- ಪರ್ವತ ಶ್ರೇಣಿಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆಗಳ ಅಭಿವೃದ್ಧಿ
- ಸಾರಿಗೆ ಮೂಲ ಸೌಕರ್ಯಕ್ಕೆ 20 ಸಾವಿರ ಕೋಟಿ ರೂಪಾಯಿ
- ಹೊಸದಾಗಿ ರೋಪ್ ವೇಗಳ ನಿರ್ಮಾಣಕ್ಕೆ ಕ್ರಮ
- ಸದ್ಯದಲ್ಲೇ ಎಲ್ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುತ್ತದೆ
- 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ
- ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚು ಪ್ರೋತ್ಸಾಹ
- ನದಿಗಳ ಜೋಡಣೆಗೆ ಬಜೆಟ್ನಲ್ಲಿ ಗ್ರೀನ್ ಸಿಗ್ನಲ್
- ಕಾವೇರಿ, ಪೆನ್ನಾರ್ ಹಾಗೂ ಕೃಷ್ಣಾ -ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ
- ಗೋದಾವರಿ-ಕೃಷ್ಣಾ ನದಿ ಜೋಡಣೆಗೂ ಅನುಮತಿ
- ಹೊಸ ವಿಧಾನದಲ್ಲಿ ಮೆಟ್ರೋ ರೈಲಿಗೆ ಹಣ ಹೂಡಿಕೆ
- ಕನಿಷ್ಟ ಬೆಂಬಲ ಬೆಲೊಎ ಘೋಷಣೆಗೆ 2.82 ಲಕ್ಷ ಕೋಟಿ ರೂ. ಮೀಸಲು
- ಖಾದ್ಯ ತೈಲ ಆಮದು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರೋತ್ಸಾಹ
- ಭೂ ದಾಖಲೆಗಳ ಡಿಜಟಲೀಕರಣಕ್ಕೆ ಹೆಚ್ಚು ಒತ್ತು
- ನದಿ ಜೋಡಣೆಗೆ ರಾಜ್ಯ ಸರ್ಕಾರಗಳ ಅನುಮತಿ ಬೇಕಾಗುತ್ತದೆ
- ನಾಲ್ಕು ಕಡೆ ಮಲ್ಟಿ ಮಾಡೆಲ್ ಲಾಜಿಸ್ಟಕ್ ಪಾರ್ಕ್ ನಿರ್ಮಾಣ
- ಒನ್ ಕ್ಲಾಸ್ ಒನ್ ಟಿವಿಗೆ ಚಾಲನೆ ನೀಡಲಾಗುತ್ತದೆ
- ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಚಾಲನ್ ಸ್ಥಾಪನೆ
- ವಿಶ್ವ ಮಟ್ಟದ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ
- 200 ಟಿವಿ ಚಾನಲ್ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ
- ಹಳ್ಳಿ ಶಾಲೆಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಾನಲ್ ಸ್ಥಾಪನೆ
- ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ
- ಅಂಗನವಾಡಿಗಳಿಗೆ ವಿಡಿಯೋ ಹಾಗೂ ಆಡಿಯೋ ವ್ಯವಸ್ಥೆ ಮಾಡಲಾಗುತ್ತದೆ
- ಹರ್ ಘರ್, ನಲ್ ಜಲ್ ಯೋಜನೆ ಜಾರಿ ಮಾಡಲಾಗುತ್ತದೆ
- 3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಗುರಿ ಹೊಂದಲಾಗಿದೆ
- ಹರ್ ಘರ್, ನಲ್ ಜಲ್ ಯೋಜನೆಗಾಗಿ 60 ಸಾವಿರ ಕೋಟಿ ರೂ. ಮೀಸಲು
- ಪ್ರಧಾನಿ ಆವಾಸ್ ಯೋಜನೆಯಡಿಯಲ್ಲಿ 60 ಲಕ್ಷ ಮನೆಗಳ ನಿರ್ಮಾಣ ಗುರಿ
- ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿ ಅನುದಾನ
- ಹೈಡ್ರೋ ಸೋಲಾರ್ ಪ್ರಾಜೆಕ್ಟ್ಗೆ 1400 ಕೋಟಿ ರೂಪಾಯಿ
- 112 ಆಕಾಂಕ್ಷೆಯ ಜಿಲ್ಲೆಗಳಲ್ಲಿ ಶೇ.95ರಷ್ಟು ಪ್ರಗತಿಯಾಗಿದೆ
- 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ
- ಒಂದೂವರೆ ಲಕ್ಷ ಅಂಚೆ ಕಚೇರಿಗಳಿಗೆ ಬ್ಯಾಂಕ್ ಸ್ವರೂಪ ನೀಡಲಾಗುತ್ತದೆ
- 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ
- 1483 ಅನವಶ್ಯಕ ಕೇಂದ್ರ ಕಾನೂನುಗಳನ್ನು ರದ್ದು ಮಾಡಲಾಗಿದೆ
- ಎಲ್ಲಾ ಪೋಸ್ಟ್ ಆಫೀಸ್ಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆಗೆ ಅನುಕೂಲ
- ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ಗೂ ಹೆಚ್ಚಿನ ಉತ್ತೇಜನ
- ಗಡಿ ಪ್ರದೇಶಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆರ್ಥಿಕ ನೆರವು
- ಗ್ರಾಮಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್
- ಚಿಪ್ ಒಳಗೊಂಡ ಇ-ಪಾಸ್ ಪೋರ್ಟ್ ವ್ಯವಸ್ಥೆಯನ್ನು 2023ರಲ್ಲಿ ಜಾರಿಗೆ ತರಲಾಗುತ್ತದೆ
- ಹೊಸ ತಂತ್ರಜ್ಞಾನವುಳ್ಳ ಇ-ಪಾಸ್ಪೋರ್ಟ್ ವಿತರಣೆ ಮಾಡಲಾಗುತ್ತದೆ
- ಉದ್ಯಮ ಕ್ಷೇತ್ರದಲ್ಲಿ ಸರಳೀಕರಣಕ್ಕೆ ಏಕ ಗವಾಕ್ಷಿ ಯೋಜನೆ ಜಾರಿ ಮಾಡಲಾಗುತ್ತದೆ
- ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆಗೆ ವಿಶೇಷ ವ್ಯವಸ್ಥೆ, ಇದಕ್ಕಾಗಿ ಕೇಂದ್ರ ಸ್ಥಾಪನೆ
- ಗೂಡ್ಸ್ ವಾಹನಗಳಲ್ಲೂ ಎಲೆಕ್ಟ್ರಿಲ್ ವ್ಯವಸ್ಥೆ ಬಳಕೆಗೆ ಉತ್ತೇಜನ
- ಸಣ್ಣ ಸಣ್ಣ ಪಟ್ಟಣಗಳ ಅಭಿವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
- ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡಲಾಗುತ್ತದೆ
- ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ವ್ಯವಸ್ಥೆ ಜಾರಿ
- ದೇಶಾದ್ಯಂತ ಆಸ್ತಿ ನೋಂದಣಿ ಸಂಪೂರ್ಣ ಡಿಜಿಟಲೀಕರಣ ಮಾಡಲಾಗುತ್ತದೆ
- ಶೂನ್ಯ ಬಂಡವಾಳ ಕೃಷಿಯ ಉತ್ತೇಜನಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ನೆರವು
- ಎಂಟು ಭಾಷೆಗಳಲ್ಲಿ ಆಸ್ತಿಗಳ ನೋಂದಣಿಗೆ ಏಕರೂಪ ವ್ಯವಸ್ಥೆ ಮಾಡಲಾಗುತ್ತದೆ
- ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ
- ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ
- 5G ತರಂಗಾಂತರ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ
- 2022ರಲ್ಲೇ 5G ತರಂಗಾಂತರ ಸೇವೆ ಲಭ್ಯವಾಗಲಿದೆ
- ದೇಶದಲ್ಲಿ ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಮಾಡಲಾಗುತ್ತದೆ
- ವಿಶೇಷ ಕೈಗಾರಿಕಾ ವಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರಗಳ ಸಹಭಾಗಿತ್ವ ಪಡೆಯಲಾಗುತ್ತದೆ
- 2025ರೊಳಗೆ ಎಲ್ಲಾ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗುತ್ತದೆ
- ರಕ್ಷಣಾ ಇಲಾಖೆಯಲ್ಲಿ ಶೇ.68ರಷ್ಟನ್ನು ಸ್ಥಳೀಯವಾಗಿ ಖರೀದಿಗೆ ಒತ್ತು
- ಡಿಆರ್ಡಿಒ ಜೊತೆ ಖಾಸಗಿ ಕಂಪನಿಗಳ ಸಹಭಾಗಿತ್ವಕ್ಕೆ ಅನುಮತಿ
- ರಕ್ಷಣಾ ವಲಯದ ಯೋಜನೆಗೆ ಶೇ.೨೫ರಷ್ಟು ಅನುದಾನ ಕೇಂದ್ರದಿಂದ ನೀಡಿಕೆ
- ಸೋಲಾರ್ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ರೂಪಾಯಿ ಮೀಸಲು
- 10 ವಲಯಗಳಲ್ಲಿ ಗ್ರೀನ್ ಎನರ್ಜಿ ಯೋಜನೆ ಜಾರಿ ಮಾಡಲಾಗುತ್ತದೆ
- 2030ರೊಳಗೆ 280 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ
- ಎಸ್ಸಿ.ಎಸ್ಟಿ ರೈತರಿಗೆ ಆರ್ಥಿಕ ನೆರವು ನೀಡಲು ಯೋಜನೆ
- ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಎಸ್ಸಿ, ಎಸ್ಟಿ ರೈತರಿಗೆ ಉತ್ತೇಜನ
- ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಒತ್ತು
- ಅರಣ್ಯ ಕೃಷಿ ಮಾಡುವವರಿಗೆ ಹೆಚ್ಚಿನ ಆದ್ಯತೆ, ಅಂತಹವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ
- ಇಂಧನ ಕ್ಷೇತ್ರದಲ್ಲಿ ಖಾಸಗಿಯವರ ಹೂಡಿಕೆಗೆ ಅವಕಾಶ ನೀಡಲಾಗಿದೆ
- 7.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ನಿರ್ಧಾರ
- ಶೇ.35.4ರಷ್ಟು ಬಂಡವಾಳ ವೆಚ್ಚ ಹೆಚ್ಚಳವಾಗಿದೆ
- ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುತ್ತದೆ
- ಬಂಡವಾಳ ಹೂಡಿಕೆಗೆ ಸಾವರಿನ್ ಗ್ರೀನ್ ಬಾಂಡ್ಗಳ ಪರಿಚಯ
- 2023ರ ವೇಳೆಗೆ 10.9 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚ ಮಾಡಲಾಗುತ್ತದೆ
- ಆರ್ಬಿಐನಿಂದಲೇ ಡಿಜಿಟಲ್ ಕರೆನ್ಸಿ ಆರಂಭ ಮಾಡಲಾಗುತ್ತದೆ
- ಬ್ಲ್ಯಾಕ್ ಚೈನ್ ಟೆಕ್ನಾಲಜಿ ಮೂಲಕ ಡಿಜಿಟಲ್ ಕರೆನ್ಸಿ ಪರಿಚಯ
- ಇದೇ ವರ್ಷದಲ್ಲಿ ಆರ್ಬಿಐ ಡಿಜಿಟಲ್ ಕರೆನ್ಸಿ ಪರಿಚಯಿಸುತ್ತದೆ
- ಬಂಡವಾಳ ಹೂಡಲು ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ
- ರಾಜ್ಯ ಸರ್ಕಾರಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ
- ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ
- ರಾಜ್ಯಗಳ ವಿತ್ತೀಯ ಕೊರತೆ ಶೇ.4ರಷ್ಟಿರಲು ಅವಕಾಶ ನೀಡಲಾಗಿದೆ
- ತೆರಿಗೆ ಪಾವತಿ ರಿಟರ್ನ್ಸ್ ಸಲ್ಲಿಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ
- ತೆರಿಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು ಎರಡು ವರ್ಷಗಳ ಅವಕಾಶ ನೀಡಲಾಗಿದೆ
- ಸಹಕಾರಿ ಸಂಘಗಳ ಮೇಲಿನ ಸರ್ ಚಾರ್ಜ್ ಶೇ.12ರಿಂದ ಶೇ.7ಕ್ಕೆ ಇಳಿಕೆ ಮಾಡಲಾಗಿದೆ
- 10 ಕೋಟಿ ರೂಪಾಯಿ ಒಳಗಿನ ಆದಾಯದ ಸಹಕಾರಿ ಸಂಘಗಳ ಸರ್ ಚಾರ್ಜ್ ಇಳಿಕೆ
- ವಿಶೇಷ ಚೇತನರು ವಿಮೆ ಹಣ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ
- ಸ್ಟಾರ್ಟಪ್ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ
- ಅರ್ಹ ಸ್ಟಾರ್ಟಪ್ಗಳಿಗೆ ಮೂರು ವರ್ಷ ತೆರಿಗೆ ವಿನಾಯಿತಿ ಇತ್ತು
- ಡಿಜಿಟಲ್ ಆಸ್ತಿ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ
- ವರ್ಚುಯಲ್ ಡಿಜಿಟಲ್ ಕರೆನ್ಸಿ ಮೇಲೆ ತೆರಿಗೆ ವಿಧಿಸಲಾಗುತ್ತದೆ
- ಡಿಜಿಟಲ್ ಆಸ್ತಿ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ
- ವರ್ಚುಯಲ್ ಕರೆನ್ಸಿ ಮೇಲೆ ಶೇ.1 ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ
- ಕ್ರಿಪ್ಟೋ ಕರೆನ್ಸಿ ಆದಾಯದ ಮೇಲೆ ಶೇ.1 ರಷ್ಟು ಟಿಡಿಎಸ್ ಹಾಕಲಾಗುತ್ತದೆ
- ವ್ಯಾವಹಾರಿಕ ವೆಚ್ಚಕ್ಕೆ ಶಿಕ್ಷಣ ಹಾಗೂ ಆರೋಗ್ಯ ಸೆಸ್ ಇರುವುದಿಲ್ಲ
- ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಟಿಡಿಎಸ್ ಶೇ.10 ರಿಂದ ಶೇ.14ಕ್ಕೆ ಏರಿಕೆ
- ಒಂದು ಮಾರುಕಟ್ಟೆ ಒಂದು ತೆರಿಗೆ ಯೋಜನೆ ಜಾರಿ
- ಸಂಕಷ್ಟ ಕಾಲದಲ್ಲೂ ಜಿಎಸ್ಟಿ ಅತಿ ಹೆಚ್ಚು ಸಂಗ್ರಹವಾಗುತ್ತಿದೆ
- ಜನವರಿಯಲ್ಲಿ 1 ಲಕ್ಷ 46 ಸಾವಿರ ಕೋಟಿ ರೂಪಾಯಿ ಸಂಗ್ರಹ
- ಬಟ್ಟೆ ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ
- ನೇರ ತೆರಿಗೆಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಮಾಡುತ್ತಿಲ್ಲ
- ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಇಲ್ಲ
- ಕೃಷಿ ಉಪಕರಣ ಹಾಗೂ ವಿದೇಶಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ
- ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ
- ಮೊಬೈಲ್ ಹಾಗೂ ಮೊಬೈಲ್ ಚಾರ್ಜರ್ಗಳ ಬೆಲೆ ಇಳಿಕೆ
- ಕಾರ್ಪೊರೇಟ್ ಸರ್ ಚಾರ್ಜ್ ಕೂಡಾ ಇಳಿಕೆ ಂಆಡಲಾಗಿದೆ
- ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕ ಶೇ.5 ರಷ್ಟು ಇಳಿಕೆ
- ಚಪ್ಪಲಿ, ಬಟ್ಟೆ, ಮೊಬೈಲ್, ಕೃಷಿ ಉಪಕರಣಗಳು ಅಗ್ಗವಾಗಲಿವೆ