ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಟಿಮ್ ಬ್ರೆಸ್ನನ್
ಲಂಡನ್ : ಇಂಗ್ಲೆಂಡ್‌ನ ಆಲ್‌ರೌಂಡರ್ ಟಿಮ್ ಬ್ರೆಸ್ನನ್ ತಮ್ಮ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ತಮ್ಮ 36ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಟಿಮ್ ನಿವೃತ್ತಿ ಘೋಷಣೆ ಮಾಡಿರುವುದನ್ನು ಅವರ ದೇಸಿ ಕ್ಲಬ್ ವಾರ್ವಿಕ್ ಶೈರ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಟಿಮ್ ಬ್ರೆಸ್ನನ್ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿ, ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ನನಗೆ ನಂಬಲಾಗದಷ್ಟು ಕಠಿಣ ನಿರ್ಧಾರವಾಗಿದೆ ಆದರೆ ಇದು ನನಗೆ ಅನಿವಾರ್ಯತೆಯಾಗಿದೆ. ನನಗೆ ಕ್ರಿಕೆಟ್ ಆಡಲು ಉತ್ಸಾಹವಿದೆ ಆದರೆ ದೇಹಕ್ಕೆ ಇಲ್ಲ ಎಂದು ತಿಳಿಸಿದರು.
ನನ್ನ ವೃತ್ತಿ ಜೀವನವನ್ನು ನಾನು ಹೆಮ್ಮೆಯಿಂದ ಹಿಂತಿರುಗಿ ನೋಡುತ್ತೇನೆ ಮತ್ತು ನನ್ ತವರು ಕೌಂಟಿ ದೇಶವಾದ ವಾರ್ಮಿಕ್‌ಷೈರ್ ಅನ್ನು ಪ್ರತಿನಿಧಿಸಿರುವುದು ಒಂದು ಸಂಪೂರ್ಣ ಗೌರವವಾಗಿದೆ. ಕೆಲವು ಸಾಧಕರೊಂದಿಗೆ ನಾನು ಆಡಿರುವುದು ನನ್ನ ಅದೃಷ್ಟ.
2006ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಟಿಮ್ ಬ್ರಿಸ್ನೆನ್ ಇಂಗ್ಲೆಂಡ್ ಪರ 26ಟೆಸ್ಟ್ ಮತ್ತು 142 ಏಕದಿನ ಪಂದ್ಯಗಳನ್ನಾಡಿದ್ದಾರೆ.