ಕೆನಡಾ ಪ್ರಧಾನಿ ಟ್ರುಡೋ ಕಾಲೆಳದ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್
ಕೆನಡಾದಲ್ಲಿ ಕೋವಿಡ್ ನಿಯಂತ್ರಿಸು ಸಲುವಾಗಿ ಅಲ್ಲಿನ ಸರ್ಕಾರ ಹೇರಿರುವ ನಿರ್ಬಂಧಗಳನ್ನು ವಿರೋಧಿಸಿ ಅಲ್ಲಿನ ನಾಗರೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಮತ್ತು ಅವರ ಕುಟುಂಬ ರಾಜಧಾನಿ ಒಟ್ಟಾವಾದಿಂದ ಅಜ್ಞಾತ ಸ್ಥಳಕ್ಕೆ ವಾಸ್ತವ್ಯ ಬದಲಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಇದನ್ನು ಉಲ್ಲೇಖಿಸಿ ಕೆನಡಾ ಪ್ರಧಾನಿಯ ಕಾಲೆಳೆದಿದ್ದಾರೆ. ಲಸಿಕೆ ಮತ್ತು ಮಾಸ್ಕ್ ಬಳಸುವುದರ ಜೊತೆಗೆ ಕೆನಡಾ ಸರ್ಕಾರ ಲಾಕ್‌ಡೌನ್ ಕೂಡ ಮಾಡಿದೆ. ಇದರಿಂದಾಗಿ ಈ ಪ್ರತಿಭಟನೆ ನಡೆದಿದೆ.
ʼಕರ್ಮ ಕೆಫೆಗೆ ಸ್ವಾಗತʼ ಇಲ್ಲಿ ಯಾವುದೇ ಮೆನು ಇಲ್ಲ, ನಿಮ್ಮ ಅರ್ಹತೆ ಅನುಸಾರ ಸೇವೆ ದೊರೆಯಲಿದೆ. ನೀವು ಎಷ್ಟು ಪ್ರಬಲರಾಗಿದ್ದೀರೋ ಅದರಂತೆಯೇ ಖಾದ್ಯ ಸ್ವೀಕರಿಸಲಿದ್ದೀರಿ ಎಂದು ಪ್ರಧಾನಿ ಟ್ರುಡೋ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
Welcome to Karma Cafe. There are no menus here. You get served what you deserve. How much ever powerful you are you will get dished #JustinTrudeau https://t.co/miwBLHkd7N
— Venkatesh Prasad (@venkateshprasad) January 31, 2022