Sports

ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ಆಶ್ಚರ್ಯ ಮೂಡಿಸಿದೆ : ರಿಕ್ಕಿ ಪಾಂಟಿಂಗ್

ನವದೆಹಲಿ : ಭಾರತದ ಅತ್ಯಂತ ಯಶಸ್ವಿ ಟೆಸ್ಟ್‌ ನಾಯಕ ಎನಿಸಿಕೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ರಿಕ್ಕಿ ಪಾಂಟಿಂಗ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ರಿಕ್ಕಿಪಾಂಟಿಂಗ್‌, “ವಿರಾಟ್‌ ಅವರು ವೈಟ್‌ ಬಾಲ್‌ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿಯಲು ಮುಂಚೆಯೇ ಮನಸ್ಸು ಮಾಡಿದ್ದರು. ಅವರು ಅಧೀಕೃತವಾಗಿ ಘೋಷಿಸುವ ಐದು ತಿಂಗಳು ಮುಂಚೆಯೇ ಅವರು ತೀರ್ಮಾನಿಸಿದ್ದರು. ಆದರೆ ಅವರು ಟೆಸ್ಟ್‌ ಕ್ರಿಕೆಟ್‌ ನಾಯಕರಾಗಿ ಮುಂದುವರೆಯಲು ಉತ್ಸುಕರಾಗಿದ್ದರು. ಅವರ ಈ ನಿರ್ಧಾರ ನಿಜಕ್ಕೂ ಆಶ್ಚರ್ಯ ತಂದಿದೆ. ಭಾರತ ತಂಡವು ವಿರಾಟ್‌ ಅವರ ನಾಯಕತ್ವದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಟೆಸ್ಟ್‌ನಲ್ಲಿ ನಂಬರ್‌ ಒನ್‌ ಪಟ್ಟಕ್ಕೆ ಕೊಂಡೊಯ್ದ ಕ್ರೆಡಿಟ್‌ ವಿರಾಟ್‌ ಕೊಹ್ಲಿಗೆ ಸಲ್ಲಬೇಕು. ಆದರೂ ಅವರು ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡಿದ ವಿಚಾರ ಆಶ್ಚರ್ಯವನ್ನು ಉಂಟು ಮಾಡಿದೆ” ಎಂದು ಹೇಳಿದರು.

ವಿರಾಟ್‌ ನಾಯಕತ್ವಕ್ಕಿಂತ ಮುಂಚಿನ ಭಾರತ ತಂಡವನ್ನು ಗಮನಿಸಿದರೆ ವಿದೇಶದಲ್ಲಿ ಭಾರತ ಗೆದ್ದದ್ದು ಕಡಿಮೆ. ವಿರಾಟ್‌ ಅವರ ನಾಯಕತ್ವದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ ಟೀಂ ಇಂಡಿಯಾ. ಇನ್ನು ರೋಹಿತ್‌ ಶರ್ಮಾ ಕೂಡ ಉತ್ತಮ ಆಟಗಾರ. ಅವರ ನಾಯಕತ್ವದಲ್ಲಿ ಭಾರತ ಮತ್ತಷ್ಟು ಸಾಧನೆ ಮಾಡುವುದನ್ನು ನೋಡಲು ಕಾತುರನಾಗಿದ್ದೇನೆ ಎಂದು ರಿಕ್ಕಿ ತಿಳಿಸಿದ್ದಾರೆ.

Share Post