ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ: ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ
ಬೆಂಗಳೂರು : ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಜನಹಿತಕ್ಕಾಗಿ ನಾವು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 2018 ರಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಒಂದನ್ನೂ BJP ಈಡೇರಿಸಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಂದ ಹೆಚ್ವಿನದೇನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನಹಿತ ಏನಾಗಿದೆ ಎನ್ನುವುದನ್ನು ನೋಡಬೇಕು. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು. ನಮ್ಮ ಪ್ರಣಾಳಿಕೆಯ ಘೋಷಣೆಗಳಲ್ಲಿ 96 ರಷ್ಟು ಅನುಷ್ಠಾನ ಮಾಡಿರುವುದಾಗಿ ಅವರು ಹೇಳಿದ್ದರು. ಆದರೂ ಜನ ತಿರಸ್ಕಾರ ಮಾಡಿದರು.
ಕ್ರಾರ್ಯಕ್ರಮದ ಘೋಷಣೆ ಮಾತ್ರವಲ್ಲ ಅನುಷ್ಠಾನವೂ ಆಗಬೇಕು. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಯಾವ ರೀತಿ ಅನುಷ್ಠಾನ ಮಾಡಿದರೆ ಯಾರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು ದುಡಿಯುವ ವರ್ಗ, ಎಸ್.ಸಿ.ಎಸ್.ಟಿ ಸಮುದಾಯಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಅರಿವಿದೆ ಎಂದರು.