BengaluruCinema

ಥಿಯೇಟರ್‌ಗಳಲ್ಲಿ 50-50ರೂಲ್ಸ್‌ ವಿರುದ್ಧ ಶಿವಣ್ಣ ಅಸಮಾಧಾನ

ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವುಡ್‌ ರೂಲ್ಸ್‌ ಸಡಿಲಗೊಳಿಸಿರುವ ಸರ್ಕಾರ ಸಿನಿಮಾ ಥಿಯೇಟರ್‌ಗಳಿಗೆ ಮಾತ್ರ 50-50ನಿಯಮ ವಿಧಿಸಿರುವುದಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೊರೊನಾದಿಂದ ನಲುಗಿರುವ ಸಿನಿಮಾ ಕ್ಷೇತ್ರ ಈಗಲಾದರೂ ಸ್ವಲ್ಪ ಚೇತರಿಕೆ ಕಂಡುಕೊಳ್ಳಲಿ ಆದ್ರೆ ಈಗ ಮತ್ತೆ ಅರ್ಧಂಬರ್ಧ ನಿಯಮಾವಳಿಗಳಿಂದ ಸಿನಿ ಇಂಡಸ್ಟ್ರಿಯನ್ನು  ಮತ್ತೆ ಸಂಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ನಿರ್ಮಾಣವಾಗಿರುವ ಹೊಸ ಸಿನಿಮಾಗಳನ್ನು ಥಿಯೇಟರ್‌ಗಳಿಗೆ ಬಿಡುಗಡೆ ಮಾಡಲು, ನಿರ್ದೇಶಕ, ನಿರ್ಮಾಪಕ, ವಿತರಕರು ಹಿಂದೇಟು ಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆ ಮಾಡುವುದೇ ಜನ ನೋಡಲೆಂದು. ಜನರೇ ಇಲ್ಲದೆ ಸಿನಿಮಾ ರಿಲೀಸ್‌ ಮಾಡಿ ಪ್ರಯೋಜನ ಏನು ಎಂದು ಪ್ರಶ್ನಿಸಿದ್ದಾರೆ. ಈಗಿರುವ ರೂಲ್ಸ್‌ನಡಿ ಸಿನಿಮಾ ಬಿಡುಗಡೆ ಮಾಡಿದ್ರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

ಕೊರೊನಾ ಮೊದಲನೇ ಅಲೆಯಿಂದಲೂ ಸಿನಿಮಾ ಥಿಯೇಟರ್, ಮಾಲ್‌ಗಳು ಬಾಗಿಲು ಹಾಕಿವೆ. ಇವುಗಳನ್ನೇ ನಂಬಿಕೊಂಡು ಜೀವನ ನಡೆಸುವವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಎಲ್ಲದಕ್ಕೂ ಅನುಮತಿ ನೀಡಿ ಸಿನಿಮಾಗೆ ಮಾತ್ರ ಈ ರೀತಿಯ ನಿರ್ಬಂಧ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಶಿವಣ್ಣ ತಿಳಿಸಿದ್ರು.

Share Post