CrimeNational

ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರು ಹತ

ಜಮ್ಮು-ಕಾಶ್ಮೀರ:   ಭಾರತೀಯ ಭದ್ರತಾ ಪಡೆಗಳು ಶನಿವಾರ ಸಂಜೆಯಿಂದ ಜಮ್ಮು ಮತ್ತು ಕಾಶ್ಮೀರದ ಎರಡು  ಪ್ರದೇಶಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.  ಜೈಶ್-ಎ-ಮುಹಮ್ಮದ್ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ ಐವರು ಉಗ್ರರನ್ನು ಗುಂಡಿಕ್ಕಿದ್ದಾರೆ.

ಪುಲ್ವಾಮಾದ ನೈರಾ ಪ್ರಾಂತ್ಯದಲ್ಲಿ ಉಗ್ರರ ನುಸುಳುವಿಕೆಯನ್ನು ಅರಿತ ಯೋಧರು. ಆ ಪ್ರದೇಶವನ್ನು ಸುತ್ತುವರೆದರು. ಈ ವೇಳೆ ಪಾಕಿಸ್ತಾನದ ಜೈಶ್-ಎ-ಮಹಮ್ಮದ್ ಸಂಘಟನೆಯ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಗೆ ಪ್ರತಿದಾಳಿ ನಡೆಸಿ ಉಗ್ರರನ್ನು ಸದೆಬಡಿಯಲಾಗಿದೆ. ಘಟನೆಯಲ್ಲಿ ಜೈಶ್-ಎ-ಮೊಹಮ್ಮದ್ ಕಮಾಂಡರ್ ಜಾಹಿದ್ ವಾನಿ ಮತ್ತು ಇತರ ಮೂವರು ಪಾಕಿಸ್ತಾನಿ ಉಗ್ರರು ಹತರಾಗಿದ್ದಾರೆ.

ಇದರ ನಡುವೆ ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮತ್ತೊಂದು ಎನ್‌ಕೌಂಟರ್‌ನಲ್ಲಿ ನಡೆದಿದೆ. ಪಾಕಿಸ್ತಾನದ ಇನ್ನೊಬ್ಬ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ. ಒಟ್ಟು 12 ಗಂಟೆಗಳಲ್ಲಿ ಐವರು ಪಾಕಿಸ್ತಾನಿ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕ ನೆಲೆಗಳನ್ನು ನಾಶಮಾಡಿವೆ. ಜೊತೆಗೆ ಎಕೆ 56 ರೈಫಲ್‌ಗಳು ಸೇರಿದಂತೆ ಇನ್ನೂ ಕೆಲವು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

Share Post