ಅಪರಿಚಿತ ಯುವತಿ ಜೊತೆ ಕಾಣಿಸಿಕೊಂಡ ನಟ ಹೃತಿಕ್ ರೋಶನ್
ಮುಂಬೈ: ಸಿನಿಮಾ ಸ್ಟಾರ್‌ಗಳು ಹೋಟೆಲ್‌ಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಅದ್ರಲ್ಲೂ ಒಂದೊಂದು ಬಾರಿ ಒಬ್ಬೊಬ್ಬರ ಜೊತೆ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣರಾಗುತ್ತಾರೆ. ಅದೇ ರೀತಿ ಬಾಲಿವುಡ್ ನಟ ಹೃತಿಕ್ ರೋಷನ್ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ. ಯುವತಿಯೋರ್ವಳ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ನಟ ಹೃತಿಕ್ ರೋಶನ್ ಮುಂಬೈನ ಹೋಟೆಲ್‌ನಿಂದ ಹೊರಬರುವಾಗ ಜೊತೆಗೆ ಒಬ್ಬ ಹುಡುಗಿ ಇದ್ದಳು. ಆಕೆಯ ಕೈಹಿಡಿದು ಹೃತಿಕ್ ರೋಶನ್ ನಡೆದು ಬರುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೃತಿಕ್ ಅಪರಿಚಿತ ಯುವತಿ ಕೈಯನ್ನು ಹಿಡಿದು ತನ್ನ ಕಾರಿಗೆ ಕರೆದೊಯ್ದ ರೀತಿ ಅವರ ಡೇಟಿಂಗ್ ಜೀವನದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.