Districts

ಮಹೀಂದ್ರಾ ಶೋ ರೂಂ ಸಿಬ್ಬಂದಿ ವಿರುದ್ಧ ಕ್ರಮ: ರೈತ ಕೆಂಪೇಗೌಡರಿಗೆ ಸಂದ ಜಯ

ತುಮಕೂರು: ಕಾರು ಖರೀದಿಸಲು ಮಹೀಂದ್ರಾ ಶೋ ರೂಂಗೆ ತೆರಳಿದ ಯುವ ರೈತನಿಗೆ ಅವಮಾನ ಮಾಡಿದ ಶೋ ರೂಂ ಸಿಬ್ಬಂದಿ ವಿರುದ್ಧ ಮಹೀಂದ್ರಾ ಕಂಪನಿ ಓನರ್‌ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನೆ ನಡೆದ ಬಳಿಕ ಸ್ವತಃ ಕಂಪನಿ ಸಿಇಓ ಮತ್ತು ಛೇರ್‌ಮನ್‌ ಟ್ವೀಟ್‌ ಮಾಡಿ ಕ್ರಮ ಜರುಗಿಸುವುದಾಗಿ ಹೇಳಿದ್ರು. ಈಗ ಅಧಿಕೃತವಾಗಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಶೇರ್‌ ಮಾಡಿರುವ ಆನಂದ್‌ ಮಹೀಂದ್ರಾ.. ಜನವರಿ 21 ರಂದು ನಮ್ಮ ಮಹೀಂದ್ರಾ ಶೋ ರೂಂಗೆ  ಕೆಂಪೇಗೌಡ ಮತ್ತು ಆತನ ಸ್ನೇಹಿತರು ಭೇಟಿ ನೀಡಿದ್ದಾರೆ. ಆ ವೇಳೆ ನಮ್ಮ ಸಿಬ್ಬಂದಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಮೊದಲೇ ಭರವಸೆ ನೀಡಿದಂತೆ ಸಿಬ್ಬಂದಿ ವಿರುದ್ಧ ನಾವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ಕೆಂಪೇಗೌಡರು ಮಹೀಂದ್ರಾ ಕಂಪನಿಯ ಮೇಲೆ  ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ನಮ್ಮ ಮಹೀಂದ್ರಾ ಕಂಪನಿ ಕುಟುಂಬಕ್ಕೆ ನಿಮಗೆ ಸ್ವಾಗತ ಎಂದಿದ್ದಾರೆ.

ಇನ್ನೂ, ಡೀಲರ್ಸ್‌ ಕಂಪನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಂಪನಿಗೆ ಅವರು ಕನ್ನಡಿ ಇದ್ದಂತೆ. ಗ್ರಾಹಕರನ್ನು ಸೆಳೆಯುವಲ್ಲಿ ಅವರ ಪಾತ್ರ ಪ್ರಮುಖವಾದುದ್ದಾಗಿದೆ. ಗ್ರಾಹಕರ ಘನತೆಗೆ ಧಕ್ಕೆ ಉಂಟಾಗದಂತೆ ಕೆಲಸ ಮಾಡುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ. ನಡೆದ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ನಿಯಮಗಳ ಉಲ್ಲಂಘನೆಯಾದಲ್ಲಿ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ನಮ್ಮ ಸಿಬ್ಬಂದಿಗೆ ಸರಿಯಾದ ತರಬೇತಿ ಮತ್ತು ಕೌನ್ಸೆಲಿಂಗ್‌ ನೀಡಿ ಇನ್ನು ಮುಂದೆ ಹೀಗೆ ನಡೆಯದಂತೆ ನೀಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

Share Post