ಗೂಗಲ್ CEO ಸುಂದರ್ ಪಿಚ್ಛೈ ವಿರುದ್ಧ FIR
ಮುಂಬೈ : ಬಾಲಿವುಡ್ ನಿರ್ಮಾಪಕ ಸುನಿಲ್ ದರ್ಶನ್ ತನ್ನ ಚಿತ್ರವೊಂದರ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಸುಂದರ್ ಪಿಚೈ ಸೇರಿದಂತೆ ಒಟ್ಟು ಐದು ಮಂದಿ ವಿರುದ್ಧ FIR ದಾಖಲಿಸುವಂತೆ ಕೋರ್ಟ್ ಮುಂದೆ ಮನವಿ ಸಲ್ಲಿಸಿದ್ದರು. ಮುಂಬೈ ನ್ಯಾಯಾಲಯ ಸುನಿಲ್ ಅವರ ಮನವಿಯನ್ನು ಅಂಗೀಕರಿಸಿದೆ.
ಏಕ್ ಹಸೀನಾ ಥೀ ಏಕ್ ದಿವಾನಾ ಥಾ ಚಿತ್ರವನ್ನು ಅನುಮತಿ ಇಲ್ಲದೆ ಸಾಕಷ್ಟು ಬಾರಿ ಅಪ್ಲೋಡ್ ಮಾಡಲಾಗಿದೆ, ಇದರ ಬಗ್ಗೆ ನಾವು ಯೂಟ್ಯೂಬ್‌ಗೆ ಸಾಕಷ್ಟು ಬಾರಿ ತಿಳಿಸಿದರೂ ಕೂಡ ಅವರಿಂದ ಏನೂ ರೆಸ್ಪಾನ್ಸ್ ಸಿಕ್ಕಿಲ್ಲ ಎಂದು ಆರೋಪಿಸಿ ನಿರ್ದೇಶಕ ಸುನೀಲ್ ದರ್ಶನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಸುನಿಲ್ ದರ್ಶನ್ ಅವರು ಮಾತನಾಡಿ ” ನಿರ್ಮಾಪಕನಾಗಿ ನನಗೆ ಸಿನಿಮಾ ಮೇಲೆ ಹಕ್ಕು ಇರುತ್ತದೆ. 2017ರಲ್ಲಿ ನಿರ್ಮಿಸಿದ ಚಿತ್ರ `ಏಕ್ ಹಸೀನಾ ಥೀ ಏಕ್ ದಿವಾನಾ ಥಾ’ ಇದರ ಕಾಪಿರೈಟ್ ಅನ್ನು ಯಾರಿಗೂ ಮಾರಾಟ ಮಾಡದೇ ಇದ್ದರೂ ಅದನ್ನು ಯುಟ್ಯೂಬ್‌ನಲ್ಲಿ ಹಲವರು ಅಪ್‌ಲೋಡ್ ಮಾಡಿದ್ದಾರೆ. ಈ ಕುರಿತು ಯುಟ್ಯೂಬ್‌ಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಪಬ್ಲಿಸಿಟಿಗಾಗಿ ಈ ಕೆಲಸ ಮಾಡ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.