ನಾಳೆ ಏರ್ ಇಂಡಿಯಾ ಟಾಟಾ ಸಮೂಹಕ್ಕೆ ಹಸ್ತಾಂತರ..?
ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಇತ್ತೀಚೆಗೆ ಟಾಟಾ ಸಮೂಹ ಸಂಸ್ಥೆ ಖರೀದಿ ಮಾಡಿತ್ತು. ಇದಕ್ಕಾಗಿ 18 ಸಾವಿರ ಕೋಟಿ ರೂಪಾಯಿ ನೀಡಿತ್ತು. ಇದೀಗ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರ ಪ್ರಕ್ರಿಯೆ ಶುರುವಾಗಿದೆ. ನಾಳೆ ಏರ್ ಇಂಡಿಯಾ ಕಂಪನಿ ಹಸ್ತಾಂತರವಾಗಲಿದೆ ಎಂದು ಹೇಳಲಾಗುತ್ತಿದೆ.
ಟಾಟಾ ಸಮೂಹದ ಟೆಲೆಸ್ ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ 18 ಸಾವಿರ ಕೋಟಿ ಮೊತ್ತಕ್ಕೆ ಏರ್ ಇಂಡಿಯಾವನ್ನು ಖರೀದಿಸಿತ್ತು. ಒಪ್ಪಂದದ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್‌ನ ಶೇ 50ರಷ್ಟು ಷೇರುಪಾಲು ಸಹ ಟಾಟಾ ಸಮೂಹಕ್ಕೆ ಹಸ್ತಾಂತರ ಆಗಲಿದೆ.