ಎರಡು ಸಾವಿರ ವರ್ಷಗಳ ಹಿಂದಿನ ಮಮ್ಮಿ ಗರ್ಭದೊಳಗಿನ ಭ್ರೂಣ ಪತ್ತೆ
ಪೋಲ್ಯಾಂಡ್: 2,000 ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ಮಮ್ಮಿಯ ಗರ್ಭದಲ್ಲಿರುವ ಭ್ರೂಣವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ವಾರ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಭ್ರೂಣದ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ. ಈ ಭ್ರೂಣವು ಮಹಿಳೆ ಗರ್ಭಿಣಿಯಾದಾಗಿನಿಂದ 26 ರಿಂದ 30 ವಾರಗಳಿ ಕಳೆದಿರಬಹುದು ಎಂದು ತಿಳಿಸಿದ್ದಾರೆ. ಭ್ರೂಣದ ಮೇಲಿರುವ ಮೃದು ಅಂಗಾಂಶದಿದಾಗಿ ಆ ಭ್ರೂಣವನ್ನು ಗುರುತಿಸುವುದು ಕಷ್ಟ ಎಂದಿದ್ದಾರೆ. ಈಜಿಪ್ಟಿನ ಮಮ್ಮಿಗಳ ಬಗ್ಗೆ ವಿಜ್ಞಾನಿಗಳು ಇಲ್ಲಿಯವರೆಗೆ ಸಂಶೋಧನೆ ನಡೆಸಿರುವುದು ಎಲ್ಲರಿಗೂ ತಿಳಿದೇ ಇದೆ. ಅತ್ಯಾಧುನಿಕ ತಂತ್ರಜ್ಞಾನದ (ಮಮ್ಮಿಫಿಕೇಶನ್) ಸಹಾಯದಿಂದ ಎರಡು ಸಾವಿರ ವರ್ಷದ ಮಮ್ಮಿಯ ಗರ್ಭದಲ್ಲಿ ಭ್ರೂಣ ಪತ್ತೆಯಾಗಿದೆ.
ಕ್ಷ-ಕಿರಣ ಸ್ಕ್ಯಾನ್ ಸಹಾಯದಿಂದ ಹುಟ್ಟಲಿರುವ ಮಗುವಿನ ಅವಶೇಷಗಳ ಉಪಸ್ಥಿತಿ ಬಗ್ಗೆ ತಿಳಿಸಿದ್ದಾರೆ. ಆದರೆ ವಿಜ್ಞಾನಿಗಳು ಹೇಳುವಂತೆ ಲಭ್ಯವಿರುವ ಭ್ರೂಣ ಹೊತ್ತ ಮಹಿಳೆ ಹೆರಿಗೆಯಲ್ಲಿ ಸಾವನ್ನಪ್ಪಿಲ್ಲ ಮತ್ತು ಅವಳ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ ಎಂದು ವಿಜ್ಞಾನಿಗಳು ಆಶ್ಚರ್ಯಕರ ಸಂಗತಿಯನ್ನು ಹೇಳಿದ್ದಾರೆ. ಯಾಕಂದ್ರೆ ಹೊಟ್ಟೆಯಲ್ಲಿಯೇ ಭ್ರೂಣ ಇದ್ದ ಮೇಲೆ ಆಕೆ ಹೆರಿಗೆಯಲ್ಲಿ ಸತ್ತಿಲ್ಲ ಎಂದಿದ್ದಾರೆ. ಮಮ್ಮಿಯ ಸಮಾಧಿ ಈಗ ಪಾಳುಬಿದ್ದಿದ್ದು, ಗರ್ಭದಲ್ಲಿ ಭ್ರೂಣವನ್ನು ಏಕೆ ಬಿಟ್ಟರು ಎಂಬುದು ತಿಳಿದಿಲ್ಲ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.