ಅಕ್ರಮ ಗಣಿಗಾರಿಕೆ ವೇಳೆ ದುರಂತ; ಇಬ್ಬರ ಮೃತದೇಹ ಹೊರಕ್ಕೆ
ಕೋಲ್ಕತ್ತಾ: ಇಲ್ಲಿನ ಬರ್ದಮಾನ್ ಜಿಲ್ಲೆಯ ಫರೀದ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ದುರಂತ ಸಂಭವಿಸಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಕಲ್ಲಿದ್ದಲು ಬಂಡೆ ಕುಸಿದುಬಿದ್ದಿದ್ದು, ಅದರಡಿ ಹಲವರು ಸಿಲುಕಿದ್ದಾರೆ. ಈಗಾಗಲೇ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.
ಲೌದೋಹಾ ಮಧೈಪುರ್ ಬಳಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು. ಇಂದು ಬೆಳಗ್ಗೆ ಕೂಡಾ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿದೆ. ಬಂಡೆಗಳಡಿ ಸಿಲುಕಿ ಈಗಾಗಲೇ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಬಂಡೆಗಳಡಿ ಸಿಲುಕಿದ್ದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವರನ್ನು ಅಣ್ಣಾಹರಿ ಬೌರಿ ಹಾಗೂ ಶ್ಯಾಮಲ್ ಬೌರಿ ಎಂದು ಗುರುತಿಸಲಾಗಿದೆ. ಕಿಶೋರ್ ಬೌರಿ ಎಂಬುವವರನ್ನು ರಕ್ಷಿಸಲಾಗಿದೆ.
ಅವಶೇಷಗಳಡಿ ಪಿಂಕಿ ಬೌರಿ, ನಟ್ವಾರಿ ಬೌರಿ ಸೇರಿದಂತೆ ಹಲವರು ಸಿಲುಕಿದ್ದಾರೆಂದು ಹೇಳಲಾಗಿದೆ. ಬಂಡೆಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.