Politics

ಶಾಸಕರು ಕಾಂಗ್ರೆಸ್‌ಗೆ ಬರುವ ವಿಚಾರ; ಯತ್ನಾಳ್‌ ಹತ್ರ ಲಿಸ್ಟ್‌ ಇದೆ ಎಂದ ಡಿಕೆಶಿ

ಬೆಂಗಳೂರು; ಬಿಜೆಪಿ, ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಬರಲು ತಯಾರಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದು, ಇದಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಕೇಳಿ ಅವ್ರಿಗೆ ಲಿಸ್ಟ್‌ ಗೊತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ಗೆ ಯಾರು ಬರಲು ರೆಡಿ ಇದ್ದಾರೆ ಎಂಬುದನ್ನು ಯತ್ನಾಳ್‌ ಬಳಿ ಕೇಳಿ. ಅವ್ರಿಗೆ ಲಿಸ್ಟ್‌ ಗೊತ್ತಿದೆ. ಅವ್ರೆಲ್ಲಾ ಒಂದು ಮೀಟಿಂಗ್‌ ಕೂಡಾ ಮಾಡಿದ್ದಾರೆ ಎಂದು ಬಾಂಬ್‌ ಸ್ಫೋಟಿಸಿದ್ದಾರೆ.

Share Post