International

ತನ್ನ ಕಕ್ಷೆ ತಲುಪಿದ ʻಜೇಮ್ಸ್‌ವೆಬ್‌ʼ ಟೆಲಿಸ್ಕೋಪ್:‌ನಾಸಾ ದಿಟ್ಟ ಹೆಜ್ಜೆ

ಅಮೆರಿಕಾ:  ನಾಸಾದಿಂದ ಉಡಾವಣೆಗೊಂಡ “ಜೇಮ್ಸ್ ವೆಬ್” ದೂರದರ್ಶಕವು ಬಾಹ್ಯಾಕಾಶದಲ್ಲಿರುವ ದೂರದ ಗ್ರಹಗಳು ಮತ್ತು ಗೆಲ್ಯಾಕ್ಸಿಗಳನ್ನು ಗಮನಿಸುವಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.   10 ಮಿಲಿಯನ್ ಕಿಲೋಮೀಟರ್ ದೂರ ಕ್ರಮಿಸಲು ಈ ಟೆಲಿಸ್ಕೋಪ್  ಸುಮಾರು ಒಂದು ತಿಂಗಳ ಕಾಲ‌ ಸಮಯವನ್ನು ತೆಗೆದುಕೊಂಡಿದೆ. ತನ್ನ  ಗಮ್ಯಸ್ಥಾನವಾದ 2 ನೇ ಲಗ್ರೇಂಜ್ ಪಾಯಿಂಟ್ (L2) ಅನ್ನು ತಲುಪಿದೆ. ಇದು ಭೂಮಿಯ ಕಕ್ಷೆಯಿಂದ ಅತ್ಯಂತ ದೂರದಲ್ಲಿದೆ. ಅಲ್ಲಿಂದ ಸೂರ್ಯನ ಸುತ್ತ ಸುತ್ತುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಜೇಮ್ಸ್‌ ತನ್ನ ಗುರಿಯನ್ನಿ ತಲುಪುತ್ತಿದ್ದಂತೆ ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ  “ವೆಬ್, ಮನೆಗೆ ಸ್ವಾಗತ!”  ಎಂದು ಹೇಳಿ ಎಲ್ಲಾ ವಿಜ್ಞಾನಿಗಳಿಗೂ  ಅಭಿನಂದನೆಗಳನ್ನು ತಿಳಿಸಿದ್ದಾರೆ.

ಡಿಸೆಂಬರ್ 2021 ರಲ್ಲಿ ಉಡಾವಣೆಗೊಂಡ “ಜೇಮ್ಸ್ ವೆಬ್” ದೂರದರ್ಶಕವು ಜನವರಿ ಮೊದಲ ವಾರದಲ್ಲಿ ತನ್ನ ಮೊದಲ ಗುರಿಯನ್ನು ಸುರಕ್ಷಿತವಾಗಿ ತಲುಪಿದೆ.  ನಂತರ NASAದ ನಿಯಂತ್ರಣ ವ್ಯವಸ್ಥೆಯಿಂದ ದೂರದರ್ಶಕದ ಒತ್ತಡವನ್ನು ಹೆಚ್ಚಿಸಿದ ಬಳಿಕ ಅದು ಈಗ L2 ಅನ್ನು ತಲುಪಿ ಸರಿಯಾಗಿ ಲ್ಯಾಂಡ್‌ ಆಗಿದೆ ಎಂದು ಬಿಲ್ ನೆಲ್ಸನ್ ಹೇಳಿದರು. ಇನ್ನು ಐದು ತಿಂಗಳಲ್ಲಿ ಟೆಲಿಸ್ಕೋಪ್ ಕೆಲಸ ಆರಂಭಿಸಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ನಾಸಾದಿಂದ ಉಡಾವಣೆಗೊಂಡ ಹಬಲ್ ಬಾಹ್ಯಾಕಾಶ ದೂರದರ್ಶಕವು ವಿಶ್ವವನ್ನು ಅನ್ವೇಷಿಸಲು ಹಲವಾರು ರೀತಿಯ ಸೇವೆಗಳನ್ನು ಒದಗಿಸಿದೆ. 1990 ರಲ್ಲಿ ಉಡಾವಣೆಗೊಂಡ ಹಬಲ್ ದೂರದರ್ಶಕವು ಮೂರು ದಶಕಗಳಿಗೂ ಹೆಚ್ಚು ಕಾಲ ತನ್ನ ಕಾರ್ಯವನ್ನು ನಿರ್ವಹಿಸಿದರ ಜೊತೆಗೆ ಖಗೋಳ ಸಂಶೋಧನೆಗೆ ಉತ್ತೇಜನವನ್ನು ಸಹ ನೀಡಿದೆ. ಪ್ರಸ್ತುತ “ಜೇಮ್ಸ್ ಟೆಲಿಸ್ಕೋಪ್” ಹಬಲ್‌ಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ನಾಸಾ ಹೇಳಿಕೊಂಡಿದೆ.

Share Post