International

ಆಕಾಶದಲ್ಲಿ ಹಾರುವ ಏರ್ ಕಾರಿಗೆ ಗ್ರೀನ್‌ ಸಿಗ್ನಲ್: ಪರವಾನಗಿ ಲಭ್ಯ

ಸಾಮಾನ್ಯವಾಗಿ ಮನಷ್ಯನಿಗೆ ಏನೇನು ಆಸೆ ಇದೆಯೋ ಅದೆಲ್ಲವನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾನೆ. ಆಕಾಶದಲ್ಲಿ ಹಾರುವ ಆಸೆಯಿಂದ ವಿಮಾನ ಕಂಡುಹಿಡಿದ ಈಗ ಅದೇ ಹಾದಿಯಲ್ಲಿ ಆಕಾಶದಲ್ಲಿ ಹಾರೋಕೆ ಮತ್ತೊಂದು ವಾಹನ ತಯಾರಾಗಿದೆ ಅದೇ ಕಾರು.

ಇದು ಸಾಮಾನ್ಯ ಕಾರಲ್ಲ  ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ 8,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಹಾರುವ ಸಾಮರ್ಥ್ಯವಿರುವ ಕಾರಿದು. ಈ ಹಾರುವ ಕಾರಿಗೆ ಸ್ಲೋವಾಕ್ ಸಾರಿಗೆ ಪ್ರಾಧಿಕಾರವು ಏರೋನಾಟಿಕ್ಸ್ ಪ್ರಮಾಣಪತ್ರವನ್ನು ಕೂಡ ನೀಡಿದೆ. ಈ ಹೈಬ್ರಿಡ್ ವಿಮಾನದ ಕಾರಿಗೆ AirCar, BMW ಎಂಜಿನ್‌ಅನ್ನು ಅಳವಡಿಸಲಾಗಿದೆ. ಜೊತೆಗೆ ಇತರೆ ಕಾರುಗಳಂತೆ  ಪೆಟ್ರೋಲ್‌ನಿಂದಲೇ ಇದನ್ನು ಚಲಾಯಿಸಬಹುದಂತೆ

ಈ ಕಾರು ಮೇಲೆ ಹಾರಿ ವಿಮಾನದ ರೂಪ ಪಡೆಯಲು ಎರಡು ನಿಮಿಷ ಮತ್ತು 15 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. 70 ಗಂಟೆಗಳ ಪರೀಕ್ಷೆ, 200 ಟೇಕ್‌ಆಫ್‌ಗಳು ಮತ್ತು ಲ್ಯಾಂಡಿಂಗ್‌ಗಳ ನಂತರ ಏರ್‌ಲೈನ್  ಸಂಸ್ಥೆ ಇದನ್ನು ಪ್ರಮಾಣೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಹೈಬ್ರಿಡ್ ಕಾರ್-ಏರ್‌ಕ್ರಾಫ್ಟ್ ಅಥವಾ ಏರ್‌ಕಾರ್ ಎಂದು ಕರೆಯಲ್ಪಡುವ ಈ ಹಾರುವ ಕಾರಿಗೆ 8,200 ಅಡಿ ಎತ್ತರದಲ್ಲಿ ಸಾವಿರ ಕಿಲೋಮೀಟರ್ ಪ್ರಯಾಣಿಸಬಲ್ಲ ಬಿಎಂಡಬ್ಲ್ಯು ಎಂಜಿನ್ ಅನ್ನು ಅಳವಡಿಸಲಾಗಿದೆ ಎಂದು ಪ್ರೊಫೆಸರ್ ಸ್ಟೀಫನ್ ಕ್ಲೈನ್ ​​ಹೇಳಿದ್ದಾರೆ. ಕೇವಲ 2 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಅದು ಕಾರಿನಿಂದ ವಿಮಾನವಾಗಿ ಬದಲಾಗುತ್ತದೆ.

ಕಾರಿಗೆ ಎರಡೂ ಬದಿಯಲ್ಲಿ ಸಣ್ಣ ರೆಕ್ಕೆಗಳಿವೆ.ಕಾರು ತನ್ನ ರೆಕ್ಕೆಗಳನ್ನು ಹರಡಿ ಹಾರುವ ಮೊದಲು ಪಕ್ಷಿಯಾಗಿ ಬದಲಾಗುತ್ತದೆ. ಈ ಏರ್ ಕಾರ್ ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.  ಗರಿಷ್ಠ 200 ಕೆಜಿ ತೂಕವನ್ನು ಹೊತ್ತೊಯ್ಯಬಲ್ಲದು.  ವಿಮಾನದಂತೆಯೇ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಲು ರನ್‌ವೇ ಅಗತ್ಯವಿದೆ ಎಂದು ಏರ್‌ಲೈನ್‌ ಸಂಸ್ಥೆ ತಿಳಿಸಿದೆ.

Share Post