ವಿಜಯ್ ಚೌಕ್‌ನಲ್ಲಿ ಡ್ರೋನ್‌ಗಳಿಂದ ಲೇಸರ್ ಶೋ, ಯುದ್ದ ಸ್ಮಾರಕದ ರೂಪುರೇಷೆ
ದೆಹಲಿ: ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ನಡೆಯುವ ಬೀಟಿಂಗ್ ರೀಟ್ರೀಟ್‌ನಲ್ಲಿ ಲೇಸರ್ ಲೈಟ್‌ಗಳ ಶೋ ನಡೆಸಲಾಗುವುದು. ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಇಂದು ಲೇಸರ್ ಲೈಟ್ ತಾಲೀಮು ನಡೆದಿದ್ದು, ಅತ್ಯುದ್ಭುತವಾಗಿ ಮೂಡಿಬಂದಿದೆ.
Delhi: A laser show would be held for the first time at the #BeatingRetreat ceremony. Rehearsals are being done for the ceremony, to be held at the Vijay Chowk on January 29th. pic.twitter.com/E8jm9Hui7Q
— ANI (@ANI) January 24, 2022
ಇದರ ಜೊತೆಗೆ ಒಂದು ಸಾವಿರ ಡ್ರೋನ್‌ಗಳ ಸಹಾಯದಿಂದ ರಾಷ್ಟ್ರೀಯ ಯುದ್ಧ ಸ್ಮಾರಕದ ರೂಪರೇಖೆಯ ಚಿತ್ರ ಬಿಡಿಸಲು ಸಿದ್ಧತೆ ಮಾಡಿಕೊಂಡಿವೆ. ಇದೇ ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ಡ್ರೋನ್ ಮೂಲಕ ಯುದ್ಧ ಸ್ಮಾರಕದ ಚಿತ್ರ ಮೂಡಿಬರಲಿದೆ. ಹಾಗೆಯೇ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮಕ್ಕೆ ಒಂದು ಸಾವಿರ ಮೇಡ್ ಇನ್ ಇಂಡಿಯಾ ಡ್ರೋನ್‌ಗಳು ತಾಳಿಮು ನಡೆಸುತ್ತಿವೆ. ಇದೇ ಮೊದಲ ಬಾರಿಗೆ ಈವೆಂಟ್‌ನಲ್ಲಿ ಪ್ರದರ್ಶನ ನೀಡಲಿವೆ.
#WATCH | Delhi: Drones form the outline of the National War Memorial as they rehearse for the #BeatingRetreat ceremony.
1000 Made in India drones rehearse for the ceremony to be held at the Vijay Chowk on January 29th. They would be performing at the event for the first time. pic.twitter.com/aKIIIo6HzI
— ANI (@ANI) January 24, 2022