ಜಮ್ಮ-ಕಾಶ್ಮೀರದಲ್ಲಿ ಬಿಎಸ್ಎಫ್ ಯೋಧರ ಕಾರ್ಯಾಚರಣೆಯ ವಾರ್ಷಿಕ ವರದಿ ಬಿಡುಗಡೆ
ಜಮ್ಮು-ಕಾಶ್ಮೀರ: ಪ್ರತಿವರ್ಷ ಎಲ್ಲಾ ಇಲಾಖೆಗಳೂ ವಾರ್ಷಿಕ ವರದಿ ಒಪ್ಪಿಸುವಂತೆ ಆರ್ಮಿ ಕೂಡ ಅದರಲ್ಲೂ ಗಡಿಯಲ್ಲಿ ನಡೆಯುವ ಅನಾಹುತಗಳ ಬಗ್ಗೆ ಮತ್ತು ವಶಪಡಿಸಿಕೊಡಿರುವ ವಸ್ತುಗಳು ಬಗ್ಗೆ ಬಿಎಸ್ಎಫ್ ಯೋಧರ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದಾರೆ.
2021 ರ ವರ್ಷದಲ್ಲಿ BSF ಮೂರು AK-47 ರೈಫಲ್ಗಳು, ಆರು 9MM ಪಿಸ್ತೂಲ್ಗಳು, 1071 ಮದ್ದುಗುಂಡುಗಳು, ಇಪ್ಪತ್ತು ಹ್ಯಾಂಡ್ ಗ್ರೆನೇಡ್ಗಳು, ಎರಡು IEDಗಳು ಮತ್ತು 17.3 ಕೆಜಿ ಹೆರಾಯಿನ್ (ಅಂದಾಜು 88 ಕೋಟಿ ರೂ.) ವಿವಿಧ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ವಶಪಡಿಸಿಕೊಂಡಿದೆ ಎನ್ನಲಾಗಿದೆ.
J&K | During the year 2021, BSF successfully recovered/seized three AK-47 Rifles, six 9MM pistols, 1071 ammunitions, twenty hand grenades, two IEDs and 17.3 kg heroin (Rs-88 crore approx.) in different operational incidents: Kashmir Frontier, BSF, in annual presser
— ANI (@ANI) January 24, 2022
ಇದರ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ಅದರ ಬಗ್ಗೆ ಸಹ ಮಾಹಿತಿ ನೀಡಿದೆ. ವಿವಿಧ ನಾಗರಿಕ ಕ್ರಿಯಾ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಸಾಂಸ್ಕೃತಿಕ ಚಟುವಟಿಕೆಗಳು, ನಾಗರಿಕರನ್ನು ಸ್ಥಳಾಂತರಿಸುವುದು, ಹಿಮದಿಂದ ಆವೃತವಾಗಿರುವ ಪ್ರದೇಶಗಳಿಂದ ರೋಗಿಗಳು ಮತ್ತು ಎಲ್ಒಸಿಯಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಪ್ರಯತ್ನಗಳು. ಕೋವಿಡ್ ಜಾಗೃತಿ ಅಭಿಯಾನಗಳು, ನೈರ್ಮಲ್ಯೀಕರಣ ಡ್ರೈವ್ಗಳನ್ನು ಸಹ ಆಯೋಜಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.