175 ಕೋಟಿ ಆಫರ್ ರಿಜೆಕ್ಟ್ ಮಾಡಿದ ಅಕ್ಷಯ್ ಕುಮಾರ್
ಬಾಲಿವುಡ್‌ನಲ್ಲಿ ಮೋಸ್ಟ್ ಡಿಸಿಪ್ಲಿನ್ಡ್ ಆಕ್ಟರ್ ಅಂದ್ರೆ ಅದು ಅಕ್ಷಯ ಕುಮಾರ್ ಎನ್ನುತ್ತಾರೆ ಎಲ್ಲರೂ. ಶಿಸ್ತು ಬದ್ಧವಾಗಿ ಕೆಲಸ ಮಾಡುವ ಅಕ್ಷಯ ಕುಮಾರ್ ಅವರ ಬಚ್ಚನ್ ಪಾಂಡೆ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ವರ್ಷಕ್ಕೆ ಕನಿಷ್ಠ ಮೂರು ಸಿನಿಮಾ ನೀಡುತ್ತಿದ್ದ ಅಕ್ಷಯ್ ಕುಮಾರ್ ಅವರು ಈಗ ತಮ್ಮ ವೇಗವನ್ನು ಇಳಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ ಈ ವೇಗ ಇಳಿದಿದೆ.
ಫರ್ಹಾದ್ ಸಮ್ಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಚ್ಚನ್ ಪಾಂಡೆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸಾಖತ್ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್‌ಗೆ ಜೊತೆಯಾಗಿ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ.
ಕೋವಿಡ್ ತೊಂದರೆಗಳೆಲ್ಲವೂ ದೂರಗೊಂಡರೆ ಮಾರ್ಚ್ 18ಕ್ಕೆ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯೆ ಪ್ರತಿಷ್ಠಿತ ಓಟಿಟಿ ಸಂಸ್ಥೆಯೊಂದು ಬಚ್ಚನ್ ಪಾಂಡೆ ಸಿನಿಮಾಗೆ 175 ಕೋಟಿ ಆಫರ್ ಮಾಡಿದೆ. ಈ ಆಫರ್ ಅನ್ನು ಚಿತ್ರದ ನಿರ್ಮಾಪಕರು ಒಪ್ಪಿಕೊಳ್ಳಲು ಸಜ್ಜಾಗಿದ್ದರು. ಆದರೆ ಟೀಸರ್ ಅನ್ನು ದೊಡ್ಡ ಪರದೆಯ ಮೇಲೆ ನೋಡಿದ ನಿರ್ಮಾಪಕರು ಮನಸ್ಸು ಬದಲಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಅಕ್ಷಯ್ ಕುಮಾರ್ ಅವರಿಗೂ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಇದರಿಂದ ನಿರ್ಮಾಪಕರು ಮತ್ತು ಅಕ್ಷಯ್ ಒಟ್ಟಿಗೆ ಚರ್ಚಿಸಿ ತಮ್ಮ ಸಿನಿಮಾವನ್ನು ನೇರವಾಗಿ ಓಟಿಟಿಗೆ ಕೊಡುವುದಿಲ್ಲ ಎಂದು ಹೇಳಿ ಬಂದ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ.